ಪ್ರಕೃತಿ ಬೆಳಗಾವಿ
ಗೋಕಾಕ ಮೀನು ಹಿಡಿಯಲು ಹೋದ ಬಾಲಕ ನಾಪತ್ತೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಘಟಪ್ರಭಾ ನದಿಯಲ್ಲಿ ನಿನ್ನೆ ಸಾಯಂಕಾಲ ಮೀನು ಹಿಡಿಯಲು ತೆರಳಿದಾಗ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆಕೊಣ್ಣೂರಿನಲ್ಲಿ ನಡೆದಿದೆ.
ಕೊಣ್ಣೂರ ನಗರ ನಿವಾಸಿ ಮನೋಹರ ಕುಮಾರ ತಳವಾರ (15) ನಾಪತ್ತೆಯಾದ ಬಾಲಕ, ಶಾಲೆ ರಜೆ ಹಿನ್ನಲೆಯಲ್ಲಿ ಎದಿನಂತೆ ಬಾಲಕ ನಿನ್ನೆ ಭಾನುವಾರವೂ ಕೂಡ ಘಟಪ್ರಭಾ ನದಿಯಲ್ಲಿ ಮೀನು ಹೋಗಿದ್ದಾನೆ. ಬಹಳ ಹೊತ್ತಿನ ಬಳಿಕ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮಗನನ್ನು ಹುಡಿಕಿಕೊಂಡು ನದಿಯತ್ತ ಬಂದಾಗ ಕಾಣದೆ ಇರೊದರಿಂದ ಗಾಬರಿಕೊಂಡು ಸುತ್ತಲು ಹುಡುಕಾಟ ನಡೆಸಿದ್ದಾರೆ.
ಬಳಿಕ, ಪೊಲೀಸ್ ರಿಗೆ ಮಾಹಿತಿ ನೀಡಿದ್ದು , ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೋಟ್ ಗಳ ಮೂಲಕ ಶೋದ ಕಾರ್ಯ ನಡೆಸಿದ್ದರು. ಆದರೂ ಪತ್ತೆಯಾಗಿರಲ್ಲ. ಇಂದು ಮತ್ತೆ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ನೀರಿನಲ್ಲಿ ರಭಸಕ್ಕೆ ಬಾಲಕ ತೆಲಿಕೊಂಡು ಹೋಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.*************************