ಪ್ರಕೃತಿ ಬೆಳಗಾವಿ
ಗೋಕಾಕದಲ್ಲಿ ಹಾಡು ಹಗಲೇ ನಿಂತಿದ್ದ ಕಾರಿನಲ್ಲಿದ್ದ ಹಣ ಕದ್ದ ಕಳ್ಳರು…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನಗರದ ಪ್ರಮುಖ ಮಾರ್ಕೆಟ್ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿದ ಹಣವನ್ನು ಕಾರಿನ ಕಿಟಕಿ ಒಡೆದು ಹಣವನ್ನು ದೋಚಿಕೊಂಡು ಹೋಗಿದ್ದಾರೆ.
ವೈಯಕ್ತಿಕ ಕೆಲಸಕ್ಕೆ ಮಾರ್ಕೆಟ್ ಗೆ ಹೋಗಿದ್ದ ಬಾಲಚಂದ್ರ ಬನವಿ ಅವರ ಕಾರು ನಿಲ್ಲಿಸಿ, ಹೋಗಿದ್ದು ಬರುವುದರಲ್ಲಿ ಕಾರಿನಲ್ಲಿದ್ದ 50 ಸಾವಿರ ರೂಪಾಯಿ ಹಣವನ್ನು ಕಿಟಕಿ ಒಡೆದು ಹಣ ದೊಚ್ಚಿಕೊಂಡು ಪರಾರಿಯಾಗಿದ್ದಾರೆ.
ಇಂದು ಸುಮಾರು ಮಧ್ಯಾಹ್ನ 12:೦೦ ಗಂಟೆ ಸುಮಾರಿಗೆ ಹಣ ಕಳ್ಳತನ ವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಗೋಕಾಕ ನಗರದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.******************************