2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಶೇಕಡ 90% ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸನ್ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಸಾಪುರ, ಹಗೆದಾಳ್, ಶಿರೂರು, ಕರಗುಪ್ಪಿ ಗ್ರಾಮದ 10 ವಿದ್ಯಾರ್ಥಿಗಳು ಶೇಕಡ 90% ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಮತ್ತು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಮತ್ತು ಯೂಥ ಕಾಂಗ್ರೆಸ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಜಾರಕಿಹೊಳಿ ಇವರ ಸೂಚನೆಯ ಮೇರೆಗೆ ಇಂದು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಸಿಹಿ ಹಂಚಿಸಲಾಯಿತು.
ಇದೇ ಸಂದರ್ಭದಲ್ಲಿ ಸಚಿವರ ಶೈಕ್ಷಣಿಕ ಆಪ್ತ ಸಹಾಯಕರಾದ ಶ್ರೀ ಜಂಗ್ಲಿ ಸಾಬ್ ನಾಯಿಕ, ಶ್ರೀ ಲಗಮಣ್ಣ ಪಣಗುತ್ತಿ, ಬಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಭೀಮರಾಯಿ ಕಳ್ಳಿಮನಿ, ಹಾಗೂ ಶಿಕ್ಷಕರಾದ ಶ್ರೀ ರಾಜುಗೌಡ ಪಾಟೀಲ್, ಊರಿನ ಹಿರಿಯರು, ಮುಖಂಡರು ಶಾಲಾ ಶಿಕ್ಷಕರು ಮುಂತಾದರು ಭಾಗವಹಿಸಿದ್ದರು.************************