ಪ್ರಕೃತಿ ಬೆಳಗಾವಿ

ಸ್ಕೇಟಿಂಗ್ ಸ್ಫರ್ಧೆ ವಿಜೇತರಿಗೆ ಬಹುಮಾನ ವಿತರಣೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜಹಂಸಗಡ ಕೋಟೆಯಲ್ಲಿ ಫಿಟ್ ಇಂಡಿಯಾ, ಸ್ಟ್ರಾಂಗ್ ಇಂಡಿಯಾ ಎಂಬ ಥೀಮ್ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಸ್ಕೇಟರ್ ಗಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಬಹುಮಾ‌‌ನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ, ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಪ್ರಸಾದ್ ತೆಂಡೂಲ್ಕರ್, ವಿನೋದ್ ಬಾಮನೆ, ಜೋತಿಬಾ ನರ್ವಾಡೆ, ಸೂರ್ಯಕಾಂತ್ ಹಿಂಡಲ್ಗೇಕರ್, ಮಹಾದೇವ್ ಪವಾರ್, ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳು, ಪೋಷಕರು ಮತ್ತು ರಾಜಹಂಸ ಗಡದ ನಾಗರಿಕರು ಉಪಸ್ಥಿತರಿದ್ದರು.*************************

Leave a Reply

Your email address will not be published. Required fields are marked *

Back to top button