ಪ್ರಕೃತಿ ಬೆಳಗಾವಿ
ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ನೇಹಾ ಸಿದ್ದಪ್ಪ ಪೂಜಾರಿ ಅವರಿಗೆ ಸನ್ಮಾನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 2024 – 25 ನೇ ಸಾಲಿನ S.S.L.C ಯ ಫಲಿತಾಂಶ ಇಂದು ಬಿಡುಗಡೆಯಾಗಿದ್ದು S.S.L.C ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ನಿಮ್ಮ ಮುಂದಿನ ಬದುಕು ಉಜ್ವಲವಾಗಿರಲಿ.
ಇವತ್ತಿನ ದಿನ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಹಾಯಕರಾದ ಲಗಮಅಣ್ಣಾ ಪಣಗುತ್ತಿ ಅವರಿಂದ ಸ್ನೇಹಾ ಸಿದ್ದಪ್ಪ ಪೂಜಾರಿ ಅವರಿಗೆ ಸನ್ಮಾನ ಬಾಳೇಶ್ ದಾಸನಟ್ಟಿ ಗಂಗಾರಾಮ್ ಮುಂತಾದರು ಉಪಸ್ಥಿತರಿದ್ದರು
ಗ್ರಾಮ ಪಂಚಾಯಿತಿಯ ಧರನಟ್ಟಿ ಅಧ್ಯಕ್ಷರು ಸದಸ್ಯರ ವತಿಯಿಂದ ಹಾಗೂ ಪಣಗುತ್ತಿಯ ಊರಿನ ಹಿರಿಯರು ಹಾಗೂ ಮಾಜಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಹಾಲಿ ಸದಸ್ಯರು ಉಪಸ್ಥಿತರಿದ್ದರು ಇವರ ವತಿಯಿಂದ ಸನ್ಮಾನ ಮಾಡಲಾಯಿತು.
ಯಮಕ್ಕನಮರಡಿ ಮತಕ್ಷೇತ್ರದ ಪಣಗುತ್ತಿ ಗ್ರಾಮದ ವಿದ್ಯಾರ್ಥಿಯ ಸ್ನೇಹಾ ಸಿದ್ದಪ್ಪ ಪೂಜಾರಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗೆ ತುಂಬು ಹೃದಯದ ಅಭಿನಂದನೆಗಳು.************************