ಪ್ರಕೃತಿ ಬೆಳಗಾವಿ
ದಿ. ಅಶೋಕ ಪಾಟೀಲ ಕುಟುಂಬಕ್ಕೆ ಸ್ವಾಂತನ ಹೇಳಿದ ಸಚಿವ ಸತೀಶ ಜಾರಕಿಹೊಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಇಲ್ಲಿನ ಬಸವ ನಗರದಲ್ಲಿರುವ ಮಾಜಿ ನಗರಾದ್ಯಕ್ಷ ಹಾಗೂ ಘಟಪ್ರಭಾ ಸಹಕಾರಿ ಕಾರ್ಖಾನೆಯ ಚೇರಮನ್ ಅಶೋಕ ಪಾಟೀಲ ಅವರು ನಿಧನ ಹಿನ್ನೆಲೆಯಲ್ಲಿ ಇಂದು ಸಚಿವ ಸತೀಶ ಜಾರಕಿಹೊಳಿ ಅವರು ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು.
ದಿ. ಅಶೋಕ ಪಾಟೀಲ ಅವರು ಸಚಿವರಿಗೆ ತುಂಬಾ ಆತ್ಮೀಯರಾಗಿ, ಸದಾ ಒಟನಾಡ ಇಟ್ಟಕೊಂಡಿದ್ದರು. ಕಾರ್ಖಾನೆಯ ಪ್ರಗತಿಗೆ ಶ್ರಮಿಸಿದ್ದರು. ನಗರ ಸಭೆ ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಇನ್ನಿಲ್ಲ ಎಂಬುವುದು ತುಂಬಾ ನೋವಿನ ಸಂಗತಿ, ಪಾಟೀಲ ಅವರ ಕುಟುಂಬದ ಜತೆಗೆ ನಾವು ಇದ್ದೆವೆ ಎಂದು ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ದಳವಾಯಿ, ಚಂದ್ರಶೇಖರ್ ಕೊಣ್ಣೂರು, ಶಿವನಗೌಡ ಪಾಟೀಲ, ರಿಯಾಜ್ ಚೌಗಲಾ, ಜಾಪರ್ ಶಭಾಷಖಾನ್ ಇತರರು ಇದ್ದರು.*******************************