ದಕ್ಷ ಪೊಲೀಸ್ ಅಧಿಕಾರಿ ನಾರಾಯಣ ಭರಮನ್ನಿ ಯವರಿಗೆ ಸಿಎಂ ಅವಮಾನ ಮಾಡಿರುವುದು ಖಂಡನೀಯ ಯುವ ಹೋರಾಟಗಾರ ಮಹೇಶ ಎಸ್ ಶಿಗಿಹಳ್ಳಿ ಕಿಡಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಎ ಎಸ್ ಪೀ ನಾರಾಯಣ ಭರಮನ್ನಿ ರವರು ಒಬ್ಬ ಹೆಸರಾಂತ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದು ಇವರ ಸೇವೆ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿದೆ ಇದರಿಂದ ಹಂತ ಹಂತವಾಗಿ ಒಂದು ಹೆಚ್ಚಿನ ಸ್ಥಾನಕ್ಕೆ ಜವಾಬ್ದಾರಿ ವಹಿಸಿರುವುದು ಅವರ ಸಾಧನೆಯಾಗಿದೆ.
ಆದರೆ ನಿನ್ನೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಒಂದು ಕಾರ್ಯಕ್ರಮದಲ್ಲಿ ವೇದಿಕೇಮೇಲೆ ಒಬ್ಬ ಪೊಲೀಸ್ ಅಧಿಕಾರಿಯನ್ನು ಕರೆಸಿ ಸಿಎಂ ಸಿದ್ರಾಮಯ್ಯ ಅದಿಕಾರ ದರ್ಪವನ್ನು ಮೆರೆದಿದ್ದಾರೆ. ಇದರಿಂದ ಸಮಸ್ತ ಪೊಲೀಸ್ ಇಲಾಖೆಗೆ ಅವಮಾನ ಮಾಡಿದ್ದಾರೆ. ಇಡಿ ರಾಜ್ಯದ ಜನತೆಗೆ ಸಿಎಂ ರವರ ಅದಿಕಾರ ದರ್ಪ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಒಬ್ಬ ರಾಜಕರಣಿಯಾಗಿರಲಿ ಅವರ ಅಧಿಕಾರವನ್ನು ಸರಿ ತಪ್ಪು ನೋಡಿ ಅಧಿಕಾರವನ್ನು ಸರಿಯಾಗಿ ಬಳಿಸಲಿ ಆದರೆ ಅದಿಕಾರ ದರ್ಪವನ್ನು ಮೆರೆಯ ಬಾರದು ಹಾಗೂ ಸಿಎಂ ಸಿದ್ರಾಮಯ್ಯ ಪೊಲೀಸ್ ಇಲಾಖೆಗೆ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಗೌರವ ನೀಡುವುದನ್ನು ಕಲಿಯಬೇಕಿದೆ ಇಲ್ಲವಾದರೆ ಮುಂಬರುವ ದಿನಗಳಲ್ಲಿ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ಯುವ ಹೋರಾಟಗಾರ ಮಹೇಶ ಎಸ್ ಶಿಗಿಹಳ್ಳಿ ರವರು ಸಿಎಂ ಸಿದ್ರಾಮಯ್ಯ ಮೇಲೆ ಕಿಡಿ ಕಾರಿದ್ದಾರೆ.****************************