ಪ್ರಕೃತಿ ಬೆಳಗಾವಿ
ವಕೀಲರ ಮೇಲಿನ ಹಲ್ಲೆ ಖಂಡಿಸಿ ಗೋಕಾಕ ನ್ಯಾಯವಾದಿ ಸಂಘದಿಂದ ಮೌನ ಪ್ರತಿಭಟನೆ..!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ ಭಾರತೀಯ ವಕೀಲ ಪರಿಷತ್ತಿನ ಸದಸ್ಯರಾಗಿರುವ ವಕೀಲ ವೈ.ಆರ್.ಸದಾಶಿವರೆಡ್ಡಿ ಅವರ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಗೋಕಾಕ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್ ಜಿ ಪಾಟೀಲ್ ಅವರು ಒತ್ತಾಯಿಸಿದ್ದಾರೆ.
ನಗರದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ವಕೀಲರು ಮೌನ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ಗೃಹಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎಸ್ ವಿ ದೇಮಶೆಟ್ಟಿ, ನ್ಯಾಯವಾದಿ ಸಂಘದ ಉಪಾಧ್ಯಕ್ಷರಾದ ವಿ ವಾಯ್ ಜಾಗನೂರ, ಬಿ ಆರ್ ದಂಡಿನ, ಪ್ರಧಾನ ಕಾರ್ಯದರ್ಶಿ ವಿ ಬಿ ಮೆಳವಂಕಿ, ಸಹ ಕಾರ್ಯದರ್ಶಿಗಳಾದ ಎಸ್ ಬಿ ವಡೇರಹಟ್ಟಿ, ಎ ಸಿ ಕಂಡ್ರಟ್ಟಿ , ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ವಿ ಜಿ ಸಿದ್ದಾಪೂರಮಠ ಸೇರಿದಂತೆ ಅನೇಕ ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.*************************