ಚಿಕ್ಕೋಡಿ SSLC ಪರೀಕ್ಷೆ: ಮೇಡಂ ಪ್ಲೀಸ್ … ಪ್ಲೀಸ್ … ಪಾಸ್ ಮಾಡಿ ನನ್ನ ಲವ್ ಉಳಿಸಿ, ಶಿಕ್ಷಕರಿಗೆ ಚಿಕ್ಕೋಡಿ ವಿದ್ಯಾರ್ಥಿ ಮನವಿ…!!

ವಿದ್ಯಾರ್ಥಿಯ ಈ ಬರವಣಿಗೆಗೆ ದಂಗಾದ ಶಿಕ್ಷಕರು…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ, ಚಿಕ್ಕೋಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆ ಪೋಟೊಗಳು ವೈರಲ್, ಅವಳು ನನ್ನ ಲವ್ ಮಾಡಬೇಕಾದರೆ ನೀವು ಪ್ಲೀಸ್ ನನ್ನ ಪಾಸ್ ಮಾಡಬೇಕು ಮೇಡಂ, ದಯವಿಟ್ಟು ಪಾಸ್ ಎಂದು 500 ರೂ. ನೋಟು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಈ ಬರವಣಿಗೆಗೆ ಶಿಕ್ಷಕರು ಸಹ ದಂಗಾಗಿದ್ದಾರೆ.
ಪ್ಲೀಸ್ ನನ್ನ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ. ಪ್ಲೀಸ್ … ಪ್ಲೀಸ್ … ಪಾಸ್ ಮಾಡಿ ಮೇಡಂ ಎಂದು ವಿದ್ಯಾರ್ಥಿಯ ವಿಚಿತ್ರವಾಗಿ ಬೇಡಿಕೊಂಡಿದ್ದಾರೆ. ನಾನು ಪಾಸ್ ಆದರೆ, ಮಾತ್ರ ಅವಳು ನನ್ನ ಲವ್ ಮಾಡುತ್ತಾಳೆ. ಪಾಸ್ ಮಾಡಿ ನನ್ನ ಲವ್ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈತನ ಮನವಿಗೆ ಶಿಕ್ಷಕರು ಕೂಡ ಶಾಕ್ ಆಗಿದ್ದಾರೆ.
ಬೆಳಗಾವಿ ವಿದ್ಯಾರ್ಥಿಯ ಮತ್ತೊಂದು ವಿಚಿತ್ರ ಮನವಿ ಮಾಡಿಕೊಂಡಿದ್ದಾರೆ. ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು ದಯವಿಟ್ಟು ನನ್ನ ಪಾಸ್ ಮಾಡಿ, ನನ್ನ ಜೀವನ ಉಳಿಸಿ , ಬಹಳಷ್ಟು ಕನಸು ಕಂಡಿದ್ದೆನೆ. ಪಾಸ್ ಆಗಿಲ್ಲ ಅಂದರೆ ತಂದೆ-ತಾಯಿಯು ಕಾಲೇಜ್ ಕಳಿಸಲ್ ನಿಮಗೆ ಬೇಕಾದರೆ ಇನ್ನಷ್ಟು ದುಡ್ಡ ಕೊಡತ್ತಿನಿ ಎಂದು ಮನವಿ ಮಾಡಿಕೊಂಡಿರುವ ವಿಚಿತ್ರ ಪತ್ರ ವೈರಲ್ ಆಗಿದೆ.******************************