ಲೇಡಿ ಸಿಗಂ ಪಿಎಸ್ಐ ಬೆಳಗಾವಿ ಜಿಲ್ಲೆಯ ಕರದಂಡು ನಾಡಿನ ಕುವರಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಮೂಲತ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವರು ಇವರ ವಿದ್ಯಾಭ್ಯಾಸ ಧಾರವಾಡ ಹಾಗೂ ಬೆಂಗಳೂರು ನಲ್ಲಿ ಎಂಎಸ್ಸಿ ಗೋಲ್ಡ್‌ಮೆಡಲಿಸ್ಟ್ ಸದ್ಯಕ್ಕೆ ಅಶೋಕ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕೆಲಸ ಮಾಡುತ್ತಿರುವ ಅನ್ನಪೂರ್ಣ ಆರ್ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್‌ನವರು.
ಗೋಕಾಕ್ ತಾಲೂಕಿನ ಗುಜನಗಟ್ಟಿ ಗ್ರಾಮದ ಅನ್ನಪೂರ್ಣ 2018ನೇ ಬ್ಯಾಚ್‌ನ ಪಿಎಸ್‌ಐ. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅನ್ನಪೂರ್ಣ ಅವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ನೆರಳಲ್ಲಿ ಬದುಕಿದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದ ಅನ್ನಪೂರ್ಣ ಅವರು ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್‌ಸಿ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು. ಎಂಎಸ್‌ಸಿ ಪದವಿ ಪಡೆದರು ಬೇರೆ ನೌಕರಿಗಳತ್ತ ಮುಖಮಾಡದೇ ಪೊಲೀಸ್ ಇಲಾಖೆ ಸೇರಿದ್ದರು.
ಅನ್ನಪೂರ್ಣ ಅವರು ಈ ಮೊದಲು ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅದಾದ ಬಳಿಕ ಅಶೋಕ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಅಲ್ಲಿಯೇ ಕೆಲಸವನ್ನು ಅನ್ನಪೂರ್ಣ ಮುಂದುವರೆಸಿದ್ದರು.
ಈಗ ಐದು ವರ್ಷದ ಬಾಲಕಿಯ ಕೊಲೆ ಕೇಸ್‌ನ ಆರೋಪಿಯ ಎನ್‌ಕೌಂಟರ್ ಮೂಲಕ ರಾಜ್ಯದ ಜನರ ಗಮನವನ್ನು ಅನ್ನಪೂರ್ಣ ಸೆಳೆದಿದ್ದಾರೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಲೇಡಿ ಸಿಂಗಂ ಅನ್ನಪೂರ್ಣ ಸೇರಿ ಇನ್ನಿಬ್ಬರು ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.*************************