ಪ್ರಕೃತಿ ಬೆಳಗಾವಿ

16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ 2025ರ ಭಾಜನರಾದ ಎಂ ಕೆ ಯಾದವಾಡ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲೆಯ ರಾಮದುರ್ಗ ಪಟ್ಟಣದ ನಿವಾಸಿ, ಸಮಾಜ ಸೇವಕ ಹಾಗೂ INDIAN TV 24×7 ಸುದ್ದಿವಾಹಿಣಿಯ ಮುಖ್ಯಸ್ಥರಾದ ಶ್ರೀ ಎಂ ಕೆ ಯಾದವಾಡ ಅವರು 16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ 2025 ಕ್ಕೆ ಭಾಜನರಾಗಿದ್ದಾರೆ.

ಶ್ರೀ ಎಂ ಕೆ ಯಾದವಾಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ರಹವಾಸಿಯಾಗಿದ್ದಾರೆ.ಸುಮಾರು 30 ವರ್ಷದಿಂದ ರಾಮದುರ್ಗ ತಾಲೂಕಿನಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ

ಇತ್ತೀಚೆಗೆ ಅವರು ರಾಮದುರ್ಗ ಪಟ್ಟಣಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿ ರಾಮದುರ್ಗಕ್ಕೆ ನೂತನ ರೈಲು ಮಾರ್ಗ ಅವಶ್ಯಕತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ರಾಮದುರ್ಗ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಸೋಷಿಯಲ್ ಮಿಡಿಯಾ ಸುದ್ದಿ ವಾಹಿನಿಯನ್ನು ಪರಿಚಯಿಸಿ ಅದರ ಮುಖಾಂತರ ತಾಲ್ಲೂಕಿನಲ್ಲಿ ಖುಷಿ ಇರಲಿ ದುಃಖದ ವಿಚಾರ ಇರಲಿ,ಸನ್ಮಾನ ಕಾರ್ಯಕ್ರಮ, ಖಾಸಗಿ, ರಾಜಕೀಯ ಸಾಮಾಜಿಕ, ಭ್ರಷ್ಟಾಚಾರ ವಿರೋಧ, ಬಡವರ ಪರ ಧ್ವನಿ ಎತ್ತಿ ಅವರ ಬೆನ್ನಿಗೆ ನಿಂತು ಎಲ್ಲ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ತ್ವರಿತ ಗತಿಯಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ.
2019ರಲ್ಲಿ ಮಹಾಪ್ರವಾಹ ಬಂದ್ ಸಂಧರ್ದಲ್ಲಿ ನದಿ ಪಾತ್ದಲ್ಲಿ ಇದ್ದವರಿಗೆ ಹಲವಾರು ಸಂಸ್ಥಯಿಂದ ಸಹಾಯಹಸ್ತ ಮಾಡಿದ ಮಾಡಿದ ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾಲ್ ಮುಖಾಂತರ ಶುಭಕೋರಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಮದುರ್ಗ ತಾಲೂಕ ಗೌರವಧಕ್ಷ,ಕರ್ನಾಟಕ ಮುಸ್ಲಿಂ ಯೂನಿಟಿಯ ಬೆಳಗಾವಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಜಮಾತೆ-ಇ-ಇಸ್ಲಾಮಿ ಹಿಂದ್ ರಾಮದುರ್ಗ ತಾಲೂಕಾ ಮುಖಂಡರು, ಅಂತರರಾಷ್ಟ್ರೀಯ ಹಿಂದೂ-ಮುಸ್ಲಿಮ್-ಕ್ರಿಸ್ಚಿಯನ್ ಯುನೈಟೆಡ್ ಸಂಸ್ಥೆಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಸದಸ್ಯ…ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳ ಜೊತೆ ಕೂಡಿ ತಮ್ಮನ್ನು ತಾವು ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯಾಗಿದ್ದಾರೆ.
ಇವರ ಸಾಮಾಜಿಕ ಕಳಕಳಿ ಮತ್ತು ಕಾರ್ಯಗಳನ್ನು ಗುರುತಿಸಿ ಪ್ರತಿಷ್ಠಿತ ಸಂಸ್ಥೆಯಾದ ಅಂತರರಾಷ್ಟ್ರೀಯ ಹಿಂದೂ-ಮುಸ್ಲಿಮ್-ಕ್ರಿಸ್ಚಿಯನ್ ಯುನೈಟೆಡ್ ಸಂಸ್ಥೆಯು ಇವರಿಗೆ 16 ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಮತ್ತು ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಘೋಷಿಸಿದೆ
ಶ್ರೀ ಎಂ ಕೆ ಯಾದವಾಡ ಅವರು ಏಪ್ರಿಲ್ 3 ರಂದು ವಿದೇಶಕ್ಕೆ ಪ್ರಯಾಣ ಮಾಡಲಿದ್ದಾರೆ ಹಾಗೂ ಏಪ್ರಿಲ್ 5 ರಂದು ಮಲೇಷಿಯಾದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವಿಕರಿಸಲಿದ್ದಾರೆ, ರಾಮದುರ್ಗ ತಾಲೂಕಿನ ಇತಿಹಾಸದಲ್ಲಿ ಮುಸ್ಲಿಂ ಸಮುದಾಯದ ಎಂ ಕೆ ಯಾದವಾಡ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಲು ಮೊದಲ ವ್ಯಕ್ತಿಯಾಗಿದ್ದಾರೆ ನಮ್ಮ ರಾಮದುರ್ಗ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.*************************

Leave a Reply

Your email address will not be published. Required fields are marked *

Back to top button