ಸವದತ್ತಿ ಭಾಗದ ಜನರ ಬಹುದಿನಗಳ ಕನಸು ಇಂದು ನನಸು: ಸಚಿವ ಸತೀಶ್ ಜಾರಕಿಹೊಳಿ…!!

546 ಕೋಟಿ ರೂ. ವೆಚ್ಚದಲ್ಲಿ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಚಾಲನೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸತ್ತಿಗೇರಿ ಏತ ನೀರಾವರಿ ಯೋಜನೆಯಿಂದ ಸವದತ್ತಿ ಮತಕ್ಷೇತ್ರದಲ್ಲಿ ಬರುವ ವಿವಿಧ ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಭಾಗದ ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ 546 ಕೋಟಿ ರೂ. ವೆಚ್ಚದ ಸತ್ತಿಗೇರಿ ಏತ ನೀರಾವರಿ ಯೋಜನೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಸತ್ತಿಗೇರಿ ಏತ ನೀರಾವರಿ ಯೋಜನೆಯಿಂದ ಸತ್ತಿಗೇರಿ, ಮುಗಳಿಹಾಳ, ಇಟ್ನಾಳ, ಗುಡುಮಕೇರಿ, ಕೋರಕೊಪ್ಪ, ಯರಗಣವಿ, ಅಕ್ಕಿಸಾಗರ, ಗೋವನಕೊಪ್ಪ, ಸೊಪಡ್ಡ, ಕೋಡ್ಲಿವಾಡ, ಕುರಬಗಟ್ಟಿ, ತಾವಲಗೇರಿ, ಶಿವಾಪೂರ, ಕೋಟೂರ, ಮಾಡಮಗೇರಿ, ರೈನಾಪೂರ, ದಾಸನಾಳ, ಮೆಳ್ಳಿಕೇರಿ ಸೇರಿದಂತೆ ಅನೇಕ ಗ್ರಾಮದ ರೈತರಿಗೆ ಲಾಭವಾಗಲಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ: ಸವದತ್ತಿ ಕ್ಷೇತ್ರಕ್ಕೆ ಬರುವ ಎಲ್ಲ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಈ ಕ್ಷೇತ್ರಕ್ಕೆ ಬರುವ ಎಲ್ಲ ರಸ್ತೆಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಬೇಕೆಂಬ ಗುರಿ ನಮ್ಮದಾಗಿದ್ದು, ಶೀಘ್ರವಾಗಿ ಈ ಕನಸ್ಸನ್ನು ಸಹ ನನಸು ಮಾಡಲು ನಾನು ಬದ್ದವಾಗಿದ್ಧೇವೆ ಎಂದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರು ಬಹಳ ಅವಶ್ಯಕತೆ ಇದ್ದು, ಅದರಲ್ಲೂ ಕೆರೆ ತುಂಬಲು ಹಾಗೂ ನೀರಾವರಿ ಮಾಡಲು ಬಹಳ ಅವಶ್ಯಕತೆ ಇರುವದರಿಂದ ಆ ಭಾಗದಲ್ಲಿ 2 ಸಾವಿರ್ ಕ್ಯೂಸೆಕ್ ನೀರನ್ನು ಬೀಡಲಾಗಿದೆ ಎಂದು ಹೇಳಿದರು.
ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ನಮ್ಮ ಶಾಸಕರು: 5 ವರ್ಷದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಯಾವ ಶಾಸಕರು ಮಾಡಲು ಸಾಧ್ಯವಿಲ್ಲ. ಆದರೂ ಸಹ ನಮ್ಮ ಕಿತ್ತೂರಿನ ಶಾಸಕ ಬಾಬಾಸಾಹೇಬ್ ಪಾಟೀಲ ಹಾಗೂ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ನಾವು ಕೂಡಾ ಈ 5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ಬದಲಾವಣೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
“ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸವದತ್ತಿ ಶಾಸಕ ವಿಶ್ವಾಸ ವೈಧ್ಯ ಅವರಿಗೆ ರೈತ ಮುಖಂಡರು ಹಾಗೂ ವಿವಿಧ ಗಣ್ಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯರು, ಶಾಸಕರುಗಳಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಯರಗಟ್ಟಿ ತಹಶೀಲ್ದಾರ್ ಎಮ್. ವಿ. ಗುಂಡಪ್ಪಗೊಳ ಕೆಎಂಎಫ್ ನಿರ್ದೇಶಕರಾದ ಶಂಕರ ಇಟ್ನಾಳ, ಪ್ರಕಾಶ್ ವಾಲಿ, ಬಂಗಾರೆಪ್ಪ ಹರಳಿ, ಬಸು ಸತ್ತೂರಿ, ಎಪಿಎಂಸಿ ಅಧ್ಯಕ್ಷರಾದ ನೀಲಕಂಠ ಶಿದ್ದಬಸನ್ನವರ, ಮಲಿಕಸಾಬ್ ಬಾಗವಾನ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ರೈತ ಭಾಂದವರು ಉಪಸ್ಥಿತರಿದ್ದರು.*************************