8 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ, 45 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ…!!

ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಹೊಸ ಇತಿಹಾಸ ಬರೆದಿದ್ದೇನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಳೆದ 7 ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಹೊಸ ಇತಿಹಾಸ ಬರೆದಿದ್ದೇನೆ. ನೂರಾರು ಶಾಲೆ, ಅಂಗನವಾಡಿ ಕೊಠಡಿ ನಿರ್ಮಾಣ, ನೂರಾರು ದೇವಸ್ಥಾನ ಜೀರ್ಣೋದ್ಧಾರ, ಅಸಂಖ್ಯಾತ ರಸ್ತೆ ಅಭಿವೃದ್ಧಿ, ಅಪಾರ ಸಂಖ್ಯೆ ಸಮುದಾಯ ಭವನ ನಿರ್ಮಾಣ, ಬೇರೆ ಬೇರೆ ರೀತಿಯ ಮೂಲಭೂತ ಸೌಲಭ್ಯ ಸೃಷ್ಟಿ ಹೀಗೆ ಎಲ್ಲದರಲ್ಲೂ ಈ ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಕೆಲಸ ಮಾಡಿರುವ ಆತ್ಮತೃಪ್ತಿ ಹೊಂದಿದ್ದೇನೆ ಎಂದು ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಧಾಮಣೆ (ಎಸ್) ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸುಮಾರು 44.83 ಲಕ್ಷ ರೂ,ಗಳ ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇಡೀ ಕ್ಷೇತ್ರದಲ್ಲಿ ತಾರತಮ್ಯವಿಲ್ಲದೆ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಗ್ರಾಮಸ್ಥರ ಯಾವ ಬೇಡಿಕೆಯನ್ನೂ ನಿರ್ಲಕ್ಷಿಸದೆ ಕೆಲಸ ಮಾಡಿಕೊಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಸಚಿವರು ವಿನಂತಿಸಿದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಢಾಕಲು ಪಾಟೀಲ, ಮಾರುತಿ ಚೋಕುಲಕರ್, ಪ್ರಕಾಶ ಹಜಗೋಳ್ಕರ್, ಗಾವಡು ಬೆಕ್ಕೆಹಾಳ್ಕರ್, ಸೋಮಣ್ಣ ಪಾಟೀಲ, ಅಪ್ಪಾಜಿ ಪಾಟೀಲ ಇಂಜಿನಿಯರ್ ಕೇದಾರ್, ಪತ್ತಾರ, ಶೇಗುನಸಿ, ಮನೋಹರ್ ಬೆಳಗಾಂವ್ಕರ್, ಗುತ್ತಿಗೆದಾರರಾದ ಜೋಗಿ ಮುಂತಾದವರು ಉಪಸ್ಥಿತರಿದ್ದರು.
ರಸ್ತೆ ಕಾಮಗಾರಿಗೆ ಪೂಜೆ
ಧಾಮಣೆ (ಎಸ್)- ಹಜಗೂಳಿ ಮುಖ್ಯ ರಸ್ತೆಯಿಂದ ಧನಗರವಾಡಿ ಗ್ರಾಮವರೆಗಿನ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಸಹ ಸ್ಥಳೀಯರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ಸುಮಾರು 8 ಕೋಟಿ ರೂ,ಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯರ ಸಲಹೆ ಸೂಚನೆ ಪಡೆದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಢಾಕಲು ಪಾಟೀಲ, ಮಾರುತಿ ಚೋಕುಲಕರ್, ಪ್ರಕಾಶ ಹಜಗೋಳ್ಕರ್, ಗಾವಡು ಬೆಕ್ಕೆಹಾಳ್ಕರ್, ಸೋಮಣ್ಣ ಪಾಟೀಲ, ಅಪ್ಪಾಜಿ ಪಾಟೀಲ ಇಂಜಿನಿಯರ್ ಕೇದಾರ್, ಪತ್ತಾರ, ಶೇಗುನಸಿ, ಮನೋಹರ್ ಬೆಳಗಾಂವ್ಕರ್, ಗುತ್ತಿಗೆದಾರರಾದ ಜೋಗಿ ಮುಂತಾದವರು ಉಪಸ್ಥಿತರಿದ್ದರು.
ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಪೂಜೆ ಸಲ್ಲಿಸಿ, ಹಿಂದಿರುಗುವಾಗ ಮಹಾರಾಷ್ಟ್ರ ರಾಜ್ಯದ ಹಜಗೂಳಿಯ ವಾರ್ಕರಿ ಸಂಪ್ರದಾಯದ ಸದಸ್ಯರು ಪಾರಾಯಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ಸಚಿವರು ಪಾರಾಯಣದಲ್ಲೂ ಪಾಲ್ಗೊಂಡರು.**************************