ನರೇಗಾ ಕೂಲಿ ದಿನಕ್ಕೆ ರೂ. 370 ಕ್ಕೆ ಹೆಚ್ಚಳ ಏಪ್ರಿಲ್ -01 ರಿಂದ ಜಾರಿ : ಜಿ.ಪಂ. ಸಿ.ಇ.ಒ ರಾಹುಲ್ ಶಿಂಧೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಅಕುಶಲ ಕೂಲಿಕಾರರಿಗೆ ಇದೆ ಏ.01 ರಿಂದ ಪರಿಷ್ಕೃತ ಕೂಲಿ ಮೊತ್ತ 349 ರಿಂದ 370 ಕ್ಕೆ ಹಚ್ಚಳ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಸಿ.ಇ.ಒ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.
ನರೇಗಾ ಯೋಜನೆಯಡಿ ಪ್ರತಿ ದಿನ ಕೆಲಸಕ್ಕೆ ಗಂಡು ಹೆಣ್ಣಿಗೆ ಸಮಾನ ಕೂಲಿ ವೇತನ 370 ಕ್ಕೆ ಹೆಚ್ಚಳ ಮಾಡಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಮಾಡಿ 37 ಸಾವಿರ ರೂ. ತಮ್ಮ ಖಾತೆ ನೇರವಾಗಿ ಜಮಾ ಆಗುತ್ತದೆ. ವಿಶೇಷ ಚೇತನರು, ಹಿರಿಯ ನಾಗರಿಕರು ಮತ್ತು ಗರ್ಭಿಣಿ ಮಹಿಳೆಯರಿಗೆ ಕೆಲಸದಲ್ಲಿ ಶೇ 50 ರಷ್ಟು ರಿಯಾಯತಿ ಇದೆ. ರೈತರು ಕೂಲಿಕಾರರು ಮನೆಯಲ್ಲಿ ದನ, ಕುರಿ, ಕೋಳಿಗಳಿದ್ದರೆ, ನರೇಗಾ ಯೋಜನೆಯಡಿ ಶೆಡ್ಗಳು ನಿರ್ಮಿಸಿಕೊಳ್ಳಬಹುದು ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದು. ಎಂದರು.
ನರೇಗಾ ಯೋಜನೆಯ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಜಾಬ್ ಕಾರ್ಡ ಇರಬೇಕು. ನರೇಗಾ ಯೋಜನೆಯಡಿ ಕೂಲಿ ಕೆಲಸ ಅಷ್ಟೆ ಅಲ್ಲದೇ ಜಮೀನು ಇರುವ ರೈತರು ಕ್ಷೇತ್ರ ಬದು, ಕೃಷಿಹೊಂಡ, ತೋಟಗಾರಿಕೆ ಬೆಳೆ ದಾಳಿಂಬೆ, ಸಪೋಟ, ನುಗ್ಗೆಕಾಯಿ ಜೊತೆ ರೇಷ್ಮೆ ಬೆಳೆಯಲು ಅವಕಾಶ ಇದೆ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 7.98 ಲಕ್ಷ ಉದ್ಯೋಗ ಚೀಟಿಗಳನ್ನು ನೀಡಲಾಗಿದ್ದು, ಪ್ರಸ್ತುತ ವರ್ಷದಲ್ಲಿ ನರೇಗಾ ಯೋಜನೆಯಡಿ 103 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದೆ. ಅದೇ ರೀತಿ 2025-26 ಸಾಲಿಗೆ ಕೂಡಾ ಗ್ರಾಮೀಣ ಜನರು ಹೆಚ್ಚೆಚ್ಚು ಗ್ರಾಮೀಣ ಜನರು ಯೋಜನೆಯ ಲಾಭ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ ತಾಲ್ಲೂಕ ಪಂಚಾಯತಗಳಿಗೆ ಭೇಟಿ ನೀಡಿ ಹಾಗೂ ಏಕೀಕೃತ ಸಹಾಯವಾಣಿ ಸಂಖ್ಯೆ: 82775 06000ಕರೆ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.****************************