ಪ್ರಕೃತಿ ಬೆಳಗಾವಿ
ಜೈಲ್ ಜಾಮರ್ ಸಮಸ್ಯೆ : ಹಿಂಡಲಗಾ ಗ್ರಾಮಸ್ಥರ ನೆರವಿಗೆ ಧಾವಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಹಿಂಡಲಗಾ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜೈಲ್ ನಲ್ಲಿ ಅಳವಡಿಕೆಯಾಗಿರುವ ಜಾಮರ್ ರೇಂಜ್ ತಗ್ಗಿಸುವಂತೆ ಸೂಚನೆ ನೀಡಿದರು.
ನೆಟ್ವರ್ಕ್ ಜಾಮರ್ ನಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ, ವಿದ್ಯಾರ್ಥಿಗಳಿಗೆ, ಬ್ಯಾಂಕ್ ಸಿಬ್ಬಂದಿಗೆ ಹಲವಾರು ತೊಂದರೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಜೈಲಿಗೆ ಭೇಟಿ ನೀಡಿದ ಸಚಿವರು, ಜಾಮರ್ ರೆಂಜ್ ಕಡಿಮೆಗೊಳಿಸುವಂತೆ ಜೈಲ್ ಸೂಪರಿಂಟೆಂಡೆಂಟ್ ಅಧಿಕಾರಿಗೆ ಸೂಚನೆ ನೀಡಿದರು.*************************