ಶ್ರೀ ಜಡಿಸಿದ್ದೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ತಾಲ್ಲೂಕಿನ ಶ್ರೀ ಕ್ಷೇತ್ರ ಕರಡಿಗುದ್ದಿ ಗ್ರಾಮದ ದಿನಾಂಕ: 26/03/2025 ರಿಂದ ದಿನಾಂಕ: 30/03/2025 ಜಾತ್ರಾ ಮಹೋತ್ಸವ ಸಮಾರಂಭ ನಡೆಯಲಿದೆ.
ಈ ಜಾತ್ರೆ ವಿಶೇಷ ಹಗ್ಗವಿಲ್ಲದೆ ಜಗ್ಗುವ ರಥೋತ್ಸವ ಹಾಗೂ ವರ್ಷಕ್ಕೆ ಒಮ್ಮೆ ಜರಗುವ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಈ ಜಾತ್ರೆಗೆ ಬಂದು ಅಜ್ಜನವರ ದರ್ಶನ ಪಡೆದು ವರ್ಷದ ಜಾತ್ರೆಗೆ ಹರುಷ ತರುತ್ತಾರೆ ಎಂದು ಜಡಿಸಿದ್ದೇಶ್ವರ ಸೇವಾ ಕಮಿಟಿಯ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರಾದ ಶ್ರೀಯುತ ಶಂಕರಗೌಡ ಗಂಗಪ್ಪ ಪಾಟೀಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮಂತ್ರಿಗಳು ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳಕರ್ ಮತ್ತು ಕರ್ನಾಟಕ ಯುವರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷರು ಪ್ರಚಾರ ಸಮಿತಿ ಅಡಿವೆಪ್ಪ ಬ ಪಾಟೀಲ ಹಾಗೂ ಕರಡಿಗುದ್ದಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಹಾಲಪ್ಪ ನೇಸರಗಿ ಮತ್ತು ಕರಡಿಗುದ್ದಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಸದ್ಯಪ್ಪ ಮೂಕನವರ್ ಹಾಗೂ ಕರಡಿಗುದ್ದಿ ಗ್ರಾಮದ ಜನರು ಹಾಗೂ ಕರಡಿಗುದ್ದಿ ಬಸವೇಶ್ವರ ಶಿವಾ ಕಮಿಟಿ ಸದಸ್ಯರುಗಳು ಉಪಸ್ಥಿತರಿದ್ದರು.************************