ಪ್ರಕೃತಿ ಬೆಳಗಾವಿ

ನೂತನ ಕೊಠಡಿ, ಶಾಲೆ ಸೌಂದರ್ಯೀಕರಣ ಕಾಮಗಾರಿ ಉದ್ಘಾಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ವಿಜಯ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಸುಣ್ಣ -ಬಣ್ಣ ಹಚ್ಚುವ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಚಾಲನೆ ನೀಡಿದರು.

ಇದೇ ಸಮಯದಲ್ಲಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಒಂದು ಹೆಚ್ಚುವರಿ ಕೊಠಡಿಯನ್ನು ಸಹ ಸಚಿವರು ಉದ್ಘಾಟಿಸಿದರು.

ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿನಾಕ್ಷಿ ಹಿತ್ತಲಮನಿ, ಉಪಾಧ್ಯಕ್ಷರಾದ ಚೇತನಾ ಅಗಸ್ಗೇಕರ್, ವಿಠ್ಠಲ ದೇಸಾಯಿ, ಪ್ರವೀಣ ಪಾಟೀಲ, ರಾಹುಲ್ ಉರನಕರ್, ಅಶೋಕ ಕಾಂಬಳೆ, ಮಿಥುನ್ ಉಸೂಲ್ಕರ್, ಡಿ.ಬಿ.ಪಾಟೀಲ, ಗಜಾನನ ಬಾಂಡೇಕರ್, ಅಲ್ಕಾ ಕಿತ್ತೂರ್, ಸೀಮಾ ದೇವಕರ್, ಪ್ರೇರಣಾ ಮಿರಜಕರ್, ಮುಖ್ಯೋಪಾಧ್ಯಾಯರಾದ ಸರಳಾ ಕಡೆಮನಿ, ನಯನಾ ಕಿರ್ತನೆ ಮೊದಲಾದವರು ಉಪಸ್ಥಿತರಿದ್ದರು.*************************

Leave a Reply

Your email address will not be published. Required fields are marked *

Back to top button