ಪ್ರಕೃತಿ ಬೆಳಗಾವಿ

*ಸಮಾಜ ಚಿಂತಕ ಹಲಗೇಕರ್ ಅವರಿಂದ ಅಂಬೇಡ್ಕರ್ ರವರ 5000 ಕಿರು ಪುಸ್ತಕ ಬಿಡುಗಡೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಡಾ.ಬಿ.ಆರ್. ಅಂಬೇಡ್ಕರ್ ರವರ 136 ನೆ ಜಯಂತಿ ಅಂಗವಾಗಿ ಮಹಾಮಂಡಳ ಹಾಗೂ ಸಮಾಜ ಚಿಂತಕ ಆಕಾಶ್ ಹಲಗೇಕರ್ ನೇತೃತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 5000 ವಿಚಾರಧಾರೆ ಇರುವ ಕಿರು ಪುಸ್ತಕಗಳನ್ನು ಶಾಲಾ, ಕಾಲೇಜು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಳಗಾವಿ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ. ಮೊಹಮ್ಮದ್ ರೋಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆಕಾಶ್ ಇವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಈ ಪುಸ್ತಕದ ಲೇಖಕಿ ಶ್ರೀಮತಿ. ಜೀವನಲತಾ ನಡುವಿನಮನಿ, ಶ್ರೀ ಮಲ್ಲೇಶ್ ಚೌಗುಲೆ, ಶ್ರೀ ಬಸವರಾಜ ರಾಯಗೊಳ್, ಶ್ರೀ ಸಿದ್ರಾಯಿ ಮೇತ್ರಿ, ಶ್ರೀ ಮಹಾದೇವ ತಳವಾರ, ಶ್ರೀ ಸಂತೋಷ್ ಕಾಂಬಳೆ, ಶ್ರೀ. ಆಕಾಶ್ ಹಲಗೇಕರ್ ಹಾಗೂ ವಿವಿಧ ಸರಕಾರಿ ಅಧಿಕಾರಿಗಳು ಮತ್ತು ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.*****************************

Leave a Reply

Your email address will not be published. Required fields are marked *

Back to top button