ಪ್ರಕೃತಿ ಬೆಳಗಾವಿ

*ಮೇತ್ರಿ ಸಹೋದರಿಯರಿಗೆ ಶಾಸಕರ ಕಾರ್ಯಾಲಯದಲ್ಲಿ ಗೌರವದ ಸನ್ಮಾನ*

ಪ್ರಕೃತಿ ಬೆಳಗಾವಿ ಸುದ್ದಿ : ಘಟಪ್ರಭಾ : ಇತ್ತೀಚೆಗೆ ನಿಪ್ಪಾಣಿಯಲ್ಲಿ ನಡೆದ ಟೇಕ್ವಾಂಡೋ ( ಕರಾಟೆ) ಖೇಲೋ ಇಂಡಿಯಾ 2025-2026 ರ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಅನುಷ್ಕಾ ಲಕ್ಷ್ಮಣ ಮೇತ್ರಿ (ಕಂಚಿನ ಪದಕ) ಮತ್ತು ಕುಮಾರಿ ಸಲೋನಿ ಬಸವರಾಜ ಮೇತ್ರಿ ( ಬೆಳ್ಳಿ ಪದಕ) ಸಹೋದರಿಯರ ಸಾಧನೆಗೆ ಗೋಕಾಕ ಶಾಸಕರಾದ ಮಾನ್ಯ ಶ್ರೀ ರಮೇಶ್ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ಶಾಸಕರ ಕಾರ್ಯಾಲಯದಲ್ಲಿ ಕ್ರೀಢಾಪಟುಗಳನ್ನು ಸತ್ಕರಸಿ ಸನ್ಮಾನ ಮಾಡಿ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಸುರೇಶ್ ಸನದಿ,ಭೀಮಗೌಡಾ ಪೋಲಿಸ್ ಗೌಡರ, ಹಿರಿಯರಾದ,ಸುರೇಶ್ ಪಾಟೀಲ,ಮಲ್ಲಪ್ಪ ಹುಕ್ಕೇರಿ, ಆನಂದ ಬನನ್ನವರ ,ಸುಧೀರ ಜೋಡಟ್ಟಿ,ಕೃಷ್ಣಾ ಗಂಡವ್ವಗೋಳ,ದುಂಡಪ್ಪಾ ಮೇತ್ರಿ,ನಾಗರಾಜ್ ಜಂಬ್ರಿ, ಅಪ್ಪಾಸಾಬ ಮುಲ್ಲಾ ,ಬಸವರಾಜ ಮೇತ್ರಿ, ತರಬೇತುದಾರರಾದ ಲಕ್ಷ್ಮಣ ಮೇತ್ರಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.*******************************

Leave a Reply

Your email address will not be published. Required fields are marked *

Back to top button