ಪ್ರಕೃತಿ ಬೆಳಗಾವಿ

*ಐಕನಹಳ್ಳಿ ಗ್ರಾಮದ ವಿವಾದಿತ ಭೂಮಿಗೆ ತಹಶೀಲ್ದಾರ್ ಡಾ.ಎಸ್.ಯು. ಅಶೋಕ್ ಭೇಟಿ ದಾಖಲೆಗಳ ಪರಿಶೀಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ತಾಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಗ್ರಾಮದ ಸರ್ವೆ ನಂಬರ್ 127ರಲ್ಲಿನ ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದ ವಿವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ.ಎಸ್.ಯು ಅಶೋಕ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೆ ನಂಬರ್ 127ರಲ್ಲಿ ಸುಮಾರು 4 ಎಕರೆ 32 ಗುಂಟೆ ಜಮೀನಿನ ಹಕ್ಕು ಮತ್ತು ಸ್ವಾಧೀನದ ಬಗ್ಗೆ ರೈತರೊಂದಿಗೆ ಚರ್ಚಿಸಿ, ಸ್ಥಳೀಯ ನಕ್ಷೆಯೊಂದಿಗೆ ಭೂಮಿಯ ಗಡಿಗಳನ್ನು ತಾಳೆ ನೋಡಿದರು.

ನಂತರ ತಹಶೀಲ್ದಾರ್ ಡಾ. ಎಸ್.ಯು. ಆಶೋಕ್ ಮಾತನಾಡಿ ಹಳೆಯ ಕಂದಾಯ ದಾಖಲೆಗಳನ್ನು ಮತ್ತು ಸರ್ಕಾರದ ಆದೇಶಗಳನ್ನು ಪರಿಶೀಲಿಸಿ, ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು. ದಾಖಲೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಶೀಘ್ರವೇ ವಿವಾದ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಆರಕ್ಷಕರು, ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನಾ ವೇದಿಕೆ, ಮಂಡ್ಯ ಜಿಲ್ಲಾಧ್ಯಕ್ಷ ಕುಮಾರ್, ತಾಲ್ಲೂಕು ಅಧ್ಯಕ್ಷ ಅಲೇನಹಳ್ಳಿ ಚೆಲುವರಾಜ್, ರಂಗಸ್ವಾಮಿ, ಲಕ್ಷ್ಮಿಪುರ, ರಾಜೇಶ್ ಕತರಘಟ್ಟ, ನಾಗೇಶ್ ಹೊಸಹೊಳಲು ಶಿವರಾಮ್, ಮಂಜುನಾಥ್, ಅನೀಲ್, ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಚಲುವರಾಜು, ಉಮೇಶ್ ವೆಂಕಟೇಶ್, ರಾಜಯ್ಯ, ಮೂಡನಹಳ್ಳಿ ದೇವರಾಜ್, ಸೇರಿದಂತೆ ಐಕನಹಳ್ಳಿ ಗ್ರಾಮಸ್ಥರು ನೆರೆದಿದ್ದರು.*********************************

Leave a Reply

Your email address will not be published. Required fields are marked *

Back to top button