*ವಡಗಾವಿಯ ಬಸವಜ್ಯೋತಿ ಮಹಿಳಾ ಮಂಡಳದ ವತಿಯಿಂದ “ವಿಶ್ವ ಮಹಿಳಾ ದಿನ” ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ವಡಗಾವಿ ಯಲ್ಲಿರುವ ಬಸವಜ್ಯೋತಿ ಮಹಿಳಾ ಮಂಡಳದ ವತಿಯಿಂದ ಮಾರ್ಚ್ 8, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಿ ಕೆ ಅನಿತಾ ಅಕ್ಕನವರು ಮತ್ತು ಡಾ. ಸ್ಪೂರ್ತಿ ನಾಗಮೂರ್ತಿ ಅವರು ಆಗಮಿಸಿ,ಮಾತನಾಡುತ್ತಾ, ಹೆಣ್ಣು ಅಥವಾ ಸ್ತ್ರೀ ಎಂದರೆ ಅದು ಪ್ರೀತಿಯ ಸಾಗರ, ತ್ಯಾಗದ ರೂಪ, ಮನೆಗೆ ಬೆಳಕು, ಸಮಾಜಕ್ಕೆ ಶಕ್ತಿ ಎಂಬುದು ಹೆಮ್ಮೆಯ ವಿಷಯ ಕಷ್ಟಗಳಲ್ಲಿ ನಿಂತು ದಾರಿ ತೋರಿಸುವ ಮತ್ತು ನಂಬಿಕೆಯ ಇನ್ನೊಂದು ಹೆಸರೇ ಹೆಣ್ಣು,ನಾವೆಲ್ಲರೂ ಮಹಿಳೆಯರು ಎಂಬುದರ ಹೆಮ್ಮೆ ಇದೆ ಎಂದು ಹೇಳಿದರು.
ಮಂಜುಳಾ ಹಂದಿಗುಂದ ಸ್ವಾಗತಿಸಿದರು,ಪ್ರೇಮಾ ಖಾನಾಪುರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈ ಸಂಧರ್ಭದಲ್ಲಿ ಬಸವ ಜ್ಯೋತಿ ಮಹಿಳಾ ಮಂಡಳದ ಎಲ್ಲಾ ಸದಸ್ಯರು, ಪೂಜಾ ಅಂಗಡಿ, ವೀಣಾ ಉಧೋಶೀ, ಸಂಜಯ ಅಂಗಡಿ, ಸ್ಮಿತಾ ಜಮಖಂಡಿ, ಸಂಜಯ ಜಮಖಂಡಿ, ಆನಂದ ಹರತಿ, ಮಹಾಂತೇಶ್ ವಾಲಿ ಮುಂತಾದವರು ಹಾಜರಿದ್ದರು.
ಜೊತೆಗೆ ಮಹಿಳೆಯರಿಂದ ವಚನ ಗಾಯನ ಮತ್ತು ಮಹಿಳೆಯರಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.*****************************






