ಪ್ರಕೃತಿ ಬೆಳಗಾವಿ
*ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ*

ಪ್ರಕೃತಿ ಬೆಳಗಾವಿ ಸುದ್ದಿ : ಚಿಕ್ಕೋಡಿ : ಪಿಯುಸಿ ಪರೀಕ್ಷೆಯನ್ನು ಬರೆಯುವದನ್ನು ಬಿಟ್ಟು ಜೀವನದ ಪರೀಕ್ಷೆಯನ್ನೆ ಮುಗಿಸಿದ ವಿದ್ಯಾರ್ಥಿನಿ.
ಹೃದಯಾಘಾತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು.
ಭೂಮಿಕಾ ಮಾಳಂಗಿ(17) ಹೃದಯಾಘಾತದಿಂದ ಸಾವು.
ಇಂದು PUC ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿನಿ.
ಸ್ನಾನ ಮುಗಿಸಿಕೊಂಡು ಮನೆಯಿಂದ ಹೊರ ಬರುತ್ತಿದ್ದ ವೇಳೆಯೇ ಹೃದಯಾಘಾತ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ಪೋಷಕರು.
ಮಾರ್ಗ ಮಧ್ಯೆಯೇ ಅಸುನೀಗಿದ ಪಿಯುಸಿ ವಿದ್ಯಾರ್ಥಿನಿ.
ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಘಟನೆ.
ಘಟನೆಯಿಂದ ಗ್ರಾಮದಲ್ಲಿ ಶೋಕಮಯ ವಾತಾವರಣ.*******************************











