ಪ್ರಕೃತಿ ಬೆಳಗಾವಿ

ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಘೋಷಣೆ…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಚೂರಿನ “ಬೆಳಕು” ಸಾಹಿತ್ಯ, ಸಾಂಸ್ಕ್ರತಿಕ, ಶೈಕ್ಷಣಿಕ ಟ್ರಸ್ಟ್ ( ರಿ ) ಕೊಡುವ “ರಾಷ್ಟ್ರಮಟ್ಟದ ಶಿಕ್ಷಣ ರತ್ನ” ಪ್ರಶಸ್ತಿಗೆ ವಿಜಯಪುರದ ಪ್ರೊ. ಸಿದ್ದು ಸಾವಳಸಂಗ ಆಯ್ಕೆಯಾಗಿದ್ದಾರೆ. ಸದರಿಯವರು ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಲಾಗಿದೆ.

ಪ್ರೊ. ಸಿದ್ದು ಸಾವಳಸಂಗ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಇಪ್ಪತ್ತೇಳು ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಕನ್ನಡ ಪಾಠ ಬೋಧನೆ ಮಾಡುವ ಅವರು, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಉಪನ್ಯಾಸಕರಾಗಿದ್ದಾರೆ.

ಜೊತೆಗೆ ಸಾಹಿತಿಯೂ ಆದ ಅವರು ಕವನ, ಹನಿಗವನ, ಲೇಖನ, ಕತೆ, ಆಧುನಿಕ ವಚನಗಳನ್ನು ಬರೆಯುತ್ತಿದ್ದಾರೆ. ನೂರಾರು ಸಾಹಿತ್ಯಿಕ ಹಾಗೂ ಸಾಂಸ್ಕ್ರತಿಕ ಕಾರ್ಯಗಳಲ್ಲಿ ಅತಿಥಿಯಾಗಿ, ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಉಪನ್ಯಾಸಕರಾಗಿ ಹಾಗೂ ಕವನ ವಾಚನ ಮಾಡುವುದರ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಕೊಂಡಿದ್ದಾರೆ. ಈಗಾಗಲೇ “ಹೃದಯ ಹೂವಿನ ಹಂದರ” ಹನಿಗವನ ಸಂಕಲನ ಹಾಗೂ “ವಚನ ಸಂಜೀವಿನಿ” ಆಧುನಿಕ ವಚನ ಸಂಕಲನ ಪ್ರಕಟಿಸಿ ಓದುಗರ ಗಮನ ಸೆಳೆದಿದ್ದಾರೆ. “ಗೋಧೂಳಿ ಗಂಧ” ಎಂಬ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ.

ಬೆಳಕು ಸಾಹಿತ್ಯ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಅಣ್ಣಪ್ಪ ಮೇಟಿಗೌಡರ ಅವರು ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಸದರಿ “ರಾಷ್ಟ್ರಮಟ್ಟದ ಶಿಕ್ಷಣ ರತ್ನ” ಪ್ರಶಸ್ತಿಯನ್ನು ದಿನಾಂಕ 18-02-2024 ರಂದು ರವಿವಾರ ರಾಯಚೂರಿನ ರಂಗ ಮಂದಿರದಲ್ಲಿ ಅಂತರ್ ರಾಜ್ಯ ಮಟ್ಟದ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸ್ನೇಹಿತರು ಹಾಗೂ ಬಂಧುಗಳು ಪ್ರೊ. ಸಿದ್ದು ಸಾವಳಸಂಗ ಅವರು ಇನ್ನಷ್ಚು ಸಾಧನೆ ಮಾಡಲೆಂದು ಶುಭ ಹಾರೈಸಿದ್ದಾರೆ.**************************************

One Comment

  1. ಸಾವಳಸಂಗರವರು ಇಂತಹ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುವೆ. ಇದು ಅವರಿಂದ ಕನ್ನಡ ಸೇವೆಗೆ ಸಂದಗೌರವ ಎಂದು ಭಾವಿಸುವೆ . ಕಲಿಸುವ ಕೆಲಸದ ಜೊತೆಗೆ ಚಾರಿತ್ರ್ಯ ವೂ ನಿಷ್ಕಳಂಕವಾದದ್ದು.

Back to top button