ಶರಣರು ಕಂಡ ಶಿವ ಪ್ರವಚನ ಮಾಲೆ ಉದ್ಘಾಟನಾ ಕಾರ್ಯಕ್ರಮ…!!
ಶರಣರು ಕಂಡ ಶಿವ ಪ್ರವಚನ ಮಾಲೆ…
ಪ್ರಕೃತಿ ಬೆಳಗಾವಿ ಸುದ್ದಿ : ಉದ್ಘಾಟನಾ ಭಾಷಣದಲ್ಲಿ 15 ದಿನಗಳ ಕಾಲ ಪ್ರವಚನ ಮಾಲೆ ಕಾರ್ಯಕ್ರಮ ನಡೆಸಿಕೊಡಲಿರುವ ಡಾ|| ಬಸವರಾಜ್ ರಾಜ ಋಷಿ ನಿರ್ದೇಶಕರು ಬ್ರಹ್ಮಕುಮಾರಿ ಉಪವಲಯ ಕೇಂದ್ರ ಹುಬ್ಬಳ್ಳಿ ಇವರು ತನ್ನನ್ನು ತಾನು ಅರಿತರೆ ಶರಣ ನಾಗುತ್ತಾನೆ ಇಂದು ವಿಜ್ಞಾನದ ಮೂಲಕ ಸಾಧನೆ ಸಾಧಿಸಿ ಪ್ರಕೃತಿ ಹಾಗೂ ಮಾನವನ ಸುಖ ಸಾಧನೆಗಳ ಆವಿಷ್ಕಾರಗಳಿಂದ ದೇಹ ಅಭಿಮಾನಿ ಆಗಿದ್ದಾನೆ. ಜಾತಿ ಅಧಿಕಾರ ಅಂತಸ್ತಿಗೆ ಶರಣರ ಕಾಲದಲ್ಲಿ ಒಪ್ಪಿಗೆ ಇರಲಿಲ್ಲ. ಜೀವನದ ಆಚಾರದ ಮೂಲಕ ಅನುಭವ ಮಂಟಪದ ಅನುಭಾವವನ್ನು ನೀಡಿದ್ದಾರೆ.
ವಚನಗಳು ಸರ್ವಕಾಲಿಕ ಮಾರ್ಗದರ್ಶನ ನೀಡುವ ಸಾಧನೆಗಳಾಗಿದ್ದವು ಪರಸ್ಪರ ಸೋದರ ಭಾವ ನಮ್ಮ ಧರ್ಮ, ವಿಶ್ವಶಾಂತಿಗಾಗಿ: ಭಾರತೀಯರು ಪ್ರಯತ್ನ ಪಡುತ್ತಿರುವ ನಾತ್ವಿಕ ಗುಣ ಹೊಂದಿರುವ ಆಧ್ಯಾತ್ಮಿಕ ದೇಶವಾಗಿದೆ. ಚೇತನ ಶಕ್ತಿ ಆತ್ಮ ಜ್ಞಾನವನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಕಾಲ ಬಂದಿದೆ. ಶರಣರು ಯಾವ ಶ್ರೇಷ್ಠ ಜ್ಞಾನ, ಜೀವನ ಅನುಭವಗಳ ಸ್ಮರಣೆ, ವಿಶ್ವೇಶ್ವರ ಪರಮಾತ್ಮನ ಸತ್ಯ ಪರಿಚಯ, ದಿವ್ಯ ಕರ್ತವ್ಯ ಹಾಗೂ ಸೃಷ್ಟಿ ನಾಟಕದ ರಹಸ್ಯಗಳ ಬಗ್ಗೆ ತಿಳಿಯಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಸಂಜೆ 06:30 ರಿಂದ 7.30
ಪ್ರಸ್ತಾವಿಕವಾಗಿ ಮಾತನಾಡಿದ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರತಿಭಾ ಅಕ್ಕನವರು ಮಾತನಾಡುತ್ತಾ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪನೆ ಕಾರ್ಯವೈಖರಿ ಮಾನವರು ದೈವತ್ವ ಪಡೆಯುವ ವಿಶ್ವ ಹಾಗೂ ಜೀವನದ ಅವಶ್ಯಕತೆಗಳನ್ನು ಪೂರೈಸುತ್ತಾ ವಿಶ್ವದ 140 ದೇಶದಲ್ಲಿ ನಡೆಯುತ್ತಿರುವ ವಿಶ್ವ ನವ ನಿರ್ಮಾಣದ ಕಾರ್ಯ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರದೇಶಿಕ ಆಯುಕ್ತರಾದ ಶ್ರೀ ಎಂ ಜಿ ಹಿರೇಮಠರವರು ಮಾತನಾಡಿ ಭಾರತ ದೇಶ ಹಿಂಸೆಯನ್ನು ತಡೆಯುವ ಆಧ್ಯಾತ್ಮಿಕ ದೇಶವಾಗಿದೆ ಸರ್ವಧರ್ಮ ದೇಶಗಳ ಸಮ್ಮೇಳನ ಹೊಂದಿದ ದೇಶದಲ್ಲಿ ಸನ್ಯಾಸಿಗಳು, ಸುಸಂಸ್ಕೃತರು, ಸಹಿಷ್ಣುಗಳಗಳನ್ನು ಹೊಂದಲು ಈ ರೀತಿಯ ಪ್ರವಚನಗಳು ಅವಶ್ಯಕ ಎಂದರು.
ಶ್ರೀ ಹಿರೇಮಠ ಕೆಎಎಸ್ ನಿವೃತ್ತ ಅಧಿಕಾರಿಗಳು ಮಾತನಾಡಿ ದಂದ ನಗರದ ಭಾಗ್ಯ ಇಂದು ಉದಯಿಸಿದೆ ಸರ್ವರು ಈ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ವಿನಂತಿಸಿದರು
ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾ ಅಕ್ಕನವರು ಬೈಲಹೊಂಗಲ ಸೇವಾಕೇಂದ್ರದ ಸಂಚಾಲಕರು ಮಾತನಾಡಿ ಸರ್ವರೂ ಪರಮಾತ್ಮನ ಪರಿಚಯ ಪಡೆದು ದಿವ್ಯ ನೇತ್ರದ ಮೂಲಕ ಆಧ್ಯಾತ್ಮಿಕ ಸವಿರುಚಿಯನ್ನು ಪ್ರವಚನ ಮಾಲೆಯ ಮುಖಾಂತರ ಪಡೆಯಲು ವಿನಂತಿಸಿದರು
ಕಾದರವಳ್ಳಿ ಮಸೀದಿ ಮುಖ್ಯ ಗುರುಗಳಾದ ಶ್ರೀ ಹಜರತ್ ಮೀರ್ ಸಾಬ್ ಮುಜಾದರ ಮಾತನಾಡಿ ಹಲದಾರು ಶರಣರು ಭಾರತದಲ್ಲಿ ಜಾತಿ ಮತ ವಂದ ದೇಶ ಅರಿವಿಲ್ಲದೆ ಬದುಕಿ ಜಗತ್ತಿಗೆ ಮಾರ್ಗದರ್ಶನ ನೀಡಿದರು ಮಾನವನಿಗೆ ಸದ್ಗುಣ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹುಟ್ಟು ಸಾವು ನಡುವಿನ ಜೀವನ ಪ್ರೀತಿ ಸಹನೆಯಿಂದ ಬಾಳಬೇಕು. ಪ್ರೀತಿಸುವುದೇ ನಿಜವಾದ ಧರ್ಮ ಎಂದರು.
ಅವದೂತ ಭಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಶರಣರು ಕಂಡ ಶಿವ ಪ್ರವಚನ ಮಾಲೆ ಕಾರ್ಯಕ್ರಮ ನಿರ್ವಿಘ್ನವಾಗಿ ಸಾಗಲಿ ಎಂದು ಆಶೀರ್ವದಿಸಿದರು.
ಪ್ರಜಾಪಿತ್ತಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು ರಾಜಯೋಗಿನಿ ಅಂಬಿಕಾ ಅಕ್ಕನವರು ಮಾತನಾಡಿ ಸ್ವತ: ಪರಮಾತ್ಮನೇ ಧರೆಗೆ ಅವತರಿಸಿ ಈಶ್ವರೀಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದರೆ. ಇಲ್ಲಿಯ ಜ್ಞಾನ ಯೋಗ ಸೇವೆಯ ಮಹತ್ವವನ್ನು ಅರಿತು ಶರಣರು ಕಂಡ ಶಿವನನ್ನು ಅರಿಯಲು ಪ್ರೇರೇಪಿಸಿದರು.
ಶ್ರೀ ರಾಮಪ್ಪ ಆಯ್. ಹಟ್ಟಿ ನಿವೃತ್ತ ಕೆಎಎಸ್ ಅಧಿಕಾರಿಗಳು, ಅಧ್ಯಕ್ಷರು ಮಾಜಿ ಸೈನಿಕರ ಕಲ್ಯಾಣ ಸಂಘ ಪಂತನಗರ ಶ್ರೀ ಎಸ್ ಎನ್ ಹಿರೇಮರ್ ನಿವೃತ್ತ ಉಪನ್ಯಾಸಕರು, ಅಧ್ಯಕ್ಷರು ಡಾ|| ಸರ್ವಪಲ್ಲಿ ರಾಧಾಕೃಷ್ಣ ಗುರು ಬಳಗ ವಂತನಗರ ಶ್ರೀ ಎಸ್ ಬಿ ದೇಯನ್ನವರ್ ನಿವೃತ್ತ ಮುಖ್ಯ ಮುಖ್ಯೋಪಾಧ್ಯಾಯರು, ಅಧ್ಯಕ್ಷರು ಶಿವಮಂದಿರ ಕಮಿಟಿ ಪಂತನಗರ ಶ್ರೀಮತಿ ಗುಲಾಬಿ ಕೋಲ್ಕಾರ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾಳೆ ಕುಂದ್ರಿ ಶ್ರೀ ಮಹಾಂತೇಶ ವಿ ಹಿರೇಮಠ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರು ಶ್ರೀ ವೈಎಲ್ ಮುರಾಳ ನಿವೃತ್ತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ಶ್ರೀ ನಾಗಪ್ಪನವರು ಸ್ವಾಗತಿಸಿದರು. ಬ್ರಹ್ಮಕುಮಾರಿ ಅಕ್ಕ ರವರು ನಿರೂಪಿಸಿ ನಂದಿಸಿದರು.***********************************