ಬೆಳಗಾವಿಯಲ್ಲಿ “ಶರಣರು ಕಂಡ ಶಿವ” ಎಂಬ ಪ್ರವಚನ ಕಾರ್ಯಕ್ರಮ…
ಪ್ರಚಲಿತ ಸಮಾಜಕ್ಕೆ ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮೀಪದ ಪಂತನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಫೆ. 13 ರಿಂದ 19ರ ವರೆಗೆ ಪ್ರತಿ ದಿನ ಸಂಜೆ 6 ರಿಂದ 7. 30 ರ ವರಗೆ ಪಂತನಗರ ಕೇಂದ್ರದ ಓಂ ಶಾಂತಿ ಭವನದ ಆವರಣದಲ್ಲಿ
ಶರಣರು ಕಂಡ ಶಿವ ಪ್ರವಚನ ಮಾಲೆ ಕಾರ್ಯಕ್ರಮ
ನಡೆಯಲಿದೆ ಎಂದು ಬೆಳಗಾವಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಉಪ ವಲಯ ನಿರ್ದೇಶಕಿ ಅಂಬಿಕಾಜಿ ಅಕ್ಕನವರು ತಿಳಿಸಿದರು.
ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿ ಬ್ರಹ್ಮಕುಮಾರಿ ಉಪವಲಯದ ನಿರ್ದೇಶಕ ಡಾ. ಬಿ.ಕೆ ಬಸವರಾಜ ಅವರು ಕಾರ್ಯಕ್ರಮದಲ್ಲಿ ಪ್ರವಚನ ನೀಡಲಿದ್ದಾರೆ, ಜಗತ್ತಿನಲ್ಲಿ ಹಿಂಸಾಚಾರ,ಅನಾಚಾರ, ಭ್ರಷ್ಟಾಚಾರ, ದುಃಖ, ಅಶಾಂತಿ ಹೆಚ್ಚಾಗಿದೆ, ಇದರ ಪರಿವರ್ತನೆಗೆ ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ, ಆದ್ದರಿಂದ ಎಲ್ಲರೂ ಆಧ್ಯಾತ್ಮಿಕ ಶಿಕ್ಷಣದ ಕುರಿತು ತಿಳಿಯಬೇಕು ಎಂದರು.
ಸಮಾಜದಲ್ಲಿ ಆತ್ಮಜ್ಞಾನ ಹಾಗೂ ಪರಮಾತ್ಮ ಜ್ಞಾನ ಕೊರತೆಯಿಂದ ಅನೇಕ ತಪ್ಪುಗಳನ್ನು ಹಾಗೂ ಕರ್ಮ ಮಾಡುವರು, ಇದರಿಂದ ಜಾಗೃತರಾಗಿ ನಾವೆಲ್ಲರೂ ನಿಜ ಸ್ವರೂಪಿ ಆತ್ಮರು ಎಂದು ತಿಳಿಯಲು ದೇವರ ಆರಾಧನೆ, ಜೊತೆಗೆ ಪ್ರವಚನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗಪ್ಪ ದಾಸ್ತಿಕೊಪ್ಪ ಬಿ. ಕೆ ಶ್ರೀಕಾಂತ ಸೇರಿದಂತೆ ಇತರರು ಇದ್ದರು.************************************