ಮೃತರ ಪರಿಹಾರ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ: ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿದ್ದರಿಂದಲೇ ಮಂಗಳೂರು ಸುಹಾಸ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಾಯಿತು. ಮಂಗಳೂರಿನಲ್ಲಿ ಮೃತ ವ್ಯಕ್ತಿಗಳಿಗೆ ಪರಿಹಾರ ವಿತರಣೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ ಎನ್ನಲಾಗಿದೆ.
ಮೃತ ವ್ಯಕ್ತಿಗೆ ಪರಿಹಾರ ಕೊಟ್ಟರೆ ತಪ್ಪೇನು..? ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಿಕಿಹೊಳಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮಂಗಳೂರಿನಲ್ಲಿ ಸುಹಾಸ್ ಶೆಟ್ಟ ಕೊಲೆ ಆಗಿಎ. ಮೃತ ವ್ಯಕ್ತಿಗಳಿಗೆ ಪರಿಹಾರ ವಿತರಣೆ ಮಾಡಿದರೆ ತಪ್ಪೇನು?. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರಿಗೆ ಪ್ರೀಹ್ಯಾಂಡ್ ನೀಡಿದ್ದಕ್ಕೆನೆ ಆರೋಪಿಗಳನ್ನು ಬಹು ಬೇಗ ಬಂಧಿಸಲು ಸಾಧ್ಯವಾಯಿತು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ನಮ್ಮ ಕಾಂಗ್ರೆಸ್ ಸರ್ಕಾರ ಹಿಂದೂ ಮುಸ್ಲಿಂ ಎಂದು ಬೇದಭಾವ ಮಾಡುವುದಿಲ್ಲ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ ಜನಿವಾರ ತಗೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಎಲ್ಲಿಯಾದರು ಒಂದು ಘಟನೆ ನಡೆದಿರಬಹದು. ಖಾಸಗಿ ಸಂಸ್ಥೆಗಳಲ್ಲಿ ಆಗಿರುತ್ತೆ. ಎಲ್ಲದ್ದಕ್ಕೂ ಸರ್ಕಾರ ಹೊಣೆ ಮಾಡಲು ಆಗಲ್ಲ. ರಾಜಕೀಯ ದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ದಿನವು ನಡೆಯುತ್ತಿರುತ್ತದೆ ಎಂದು ವಿಪಕ್ಷಗಳಿಗೆ ಟಾಂಟ್ ಕೊಟ್ಟರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಆ ಬಗ್ಗೆ ಕಾಂಗ್ರೆಸ್ ವರಿಷ್ಠರು ನಿರ್ಧರಿಸುತ್ತಾರೆ. ಇನ್ನೂ ಕೆಪಿಎಸ್ಸಿಯಲ್ಲಿ ಎಲ್ಲಾ ಸರ್ಕಾರದಲ್ಲಿ ಗೊಂದಲಗಳು ಆಗಿವೆ. ಅದೊಂದು ಸ್ವತಂತ್ರ ಸಂಸ್ಥೆ, ಹಾಗಾಗದಂತೆ ಸಂಸ್ಥೆ ನೋಡಿಕೊಳ್ಳಬೇಕು ಎಂದರು.
ಎಲ್ಲರಿಗೂ ಸಮಾನವಾಗಿ ಗುತ್ತಿಗೆದಾರರಿಗೆ ಬಿಲ್ ಮಾಡ್ತಿದ್ದೇವೆ. ಜಾತಿ ಗಣತಿಯಲ್ಲಿ ಬಿಜೆಪಿ ಯೂಟರ್ನ್ ಹೊಡೆದಿದೆ. ಜಾತಿ ಗಣತಿ ಬಗ್ಗೆ ಅವರಿಗೆ ಏಕಾಎಕಿ ಪ್ರೀತಿ ಬಂದಿದೆ. ನಾವು ಜಾರಿ ಗಣತಿ ಮಾಡುವಾಗ ವಿರೋಧಿಸಿದರು. ಇದೀಗ ಕೇಂದ್ರ ಸರ್ಕಾರ ತಾನು ಜಾತಿ ಗಣತಿ ಮಾಡುವುದಾಗಿ ಹೇಳಿದೆ. ಅದಕ್ಕೆ ದೂರದೃಷ್ಟಿ ಎಂದು ಹೇಳಿಕೊಂಡಿದೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪೆಹಲ್ಗಾಮ್ ಉಗ್ರರ ದಾಳಿಗೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕು, ಬೇಡವಾ ಎಂಬ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಯಾವ ಏನು ಮಾಡಬೇಕೆಂದು ಅವರೇ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.
ಪಾಕಿಸ್ತಾನಕ್ಕೆ ಹೋಗಿ ಬಾಂಬ್ ಹಾಕಲು ಸೈನಿಕರಿದ್ದಾರೆ. ಎಲ್ಲರು ಹೇಳುತ್ತಾರೆ ಎಂದು ಹೋಗಿ ಯದ್ಧ ಮಾಡಲು ಆಗಲ್ಲ ಎಂದು ಜಮೀರ್ ಅಹ್ಮದ್ ಅವರು ಹೇಳಿದ್ದ ‘ಬಾಂಬ್ ಕೊಟ್ಟರೆ ನಾನು ಬಾಂಬ್ ಹಾಕಿ ಬರ್ತೇನೆ” ಎಂಬ ಹೇಳಿಕೆಗೆ ಜಾರಕಿಹೊಳಿ ಅವರು ಹೀಗೆ ಪ್ರತಿಕ್ರಿಯಿಸಿದರು.************************