ಪ್ರಕೃತಿ ಬೆಳಗಾವಿ
ಕಾಕತಿ ಗ್ರಾಮ ಪಂಚಾಯತಿಯಲ್ಲಿ ಜನರ ಸಮಸ್ಯೆ ಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಸಮೀಪದ ಕಾಕತಿ ಗ್ರಾಮ ಪಂಚಾಯತಿ ಯಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾಕತಿ ಗ್ರಾಮ ಘಟಕ ಅಧ್ಯಕ್ಷರಾದ ವಸಿಮ್ ಸನದಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆಯುವ ಅಕ್ರಮಗಳು ಹಾಗೂ ಸಾರ್ವಜನಿಕರಿ ಗೆ ಆಗುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮತ್ತು ಪಂಚಾಯತ್ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಗೆ ನೇರವಾಗಿ ಮನವಿ ಮಾಡಲಾಗಿದೆ ಹಾಗೂ ಜನರ ಸಮಸ್ಯೆ ಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು, ಮಹಾಂತೇಶ್ ಕೂಲಿ ನವರ, ಮಹಿಳಾ ಜಿಲ್ಲಾ ಅಧ್ಯಕ್ಷರು ಸಂದ್ಯಾ ಕಲಾಲ, ಜಿಲ್ಲಾ ಪ್ರದಾನ್ ಕಾರ್ಯದರ್ಶಿ ಆನಂದ್ ಪಾಟೀಲ್, ಬೆಳಗಾವಿ ತಾಲೂಕು ಅಧ್ಯಕ್ಷರು ಶ್ರೀನಿವಾಸ್ ಸುಲಧಾಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.*************************