ಪಾಲಕರೇ ನಿಮ್ಮ ಮಕಳನ್ನು ದಯವಿಟ್ಟು ಗಮನಿಸಿ ಅಕ್ಕ-ತಂಗಿದಿರೇ ನಿಮ್ಮ ಗಂಡಂದಿರನ್ನು ದಯವಿಟ್ಟು ಗಮನಿಸಿ..!!

ಇಂದಿನಿಂದ 2025ರ ಐಪಿಎಲ್ ಶುರು….!!
ಪ್ರಕೃತಿ ಬೆಳಗಾವಿ ಸುದ್ದಿ : ಇನ್ನೆರಡು ತಿಂಗಳು ಐಪಿಎಲ್ ಮಹಾಸಮರ ನಡೆಯುತ್ತಿರುವದರಿಂದ ಬೆಟ್ಟಿಂಗ್ ಹಾವಳಿ ಜಾಸ್ತಿಯಾಗುತ್ತದೆ. ದಯವಿಟ್ಟು ಬೆಟ್ಟಿಂಗ್ ಆಡಿಕೊಂಡು ಮನೆಯ ಮರ್ಯಾದೆ ಹಾಗೂ ಕಷ್ಟಗಳನ್ನು ಕೊಡಬೇಡಿ. ನಿಮ್ಮ ಖುಷಿಗೋಸ್ಕರ ಅಥವಾ ಅಭಿಮಾನಕ್ಕೋಸಕರ ಆಟ ನೋಡಿ ಮಜಾ ಮಾಡಿ. ಅದರೆ ಅವರ ಮೇಲೆ ಬೆಟ್ಟಿಂಗ್ ಅಡಿ ಹಣ ಕಳ್ಕೋಬೇಡಿ. ಬೆಟ್ಟಿಂಗ್ ದಂದೆಯಿಂದ ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ನನ್ನ ಕಣ್ಣಾರೆ ನಾನೇ ಅದೆಷ್ಟೋ ಘಟನೆಗಳನ್ನು ನೋಡಿದ್ದೀನಿ. ಬೆಟ್ಟಿಂಗ್ ಆಡೋವಾಗ ಹಣದ ಅಮಲಿನಲ್ಲಿ ಸಾಕಷ್ಟು ಸಾಲ ಮಾಡ್ಕೊಂಡು ಊರು ಬಿಟ್ಟು ಹೋಗಿ ದುಡಿದುಕೊಂಡು ಬಂದರೂ ಸಾಲ ತೀರಿಸೋಕೆ ಆಗಲ್ಲ.
ಅಪ್ಪ, ಅಮ್ಮನಿಗೆ, ಅಣ್ಣ, ಅಕ್ಕಂದಿರಿಗೆ ಕಷ್ಟ ಕೊಡಬೇಡಿ, ಇನ್ನೂ ಸಂಸಾರ ಹೊಂದಿರುವ ಗಂಡಸರು ನಿಮ್ಮ ಹೆಂಡತಿ ಮಕ್ಕಳನ್ನು ನೋಡಿಯಾದರೂ ನೀವು ಬೆಟ್ಟಿಂಗ್ ದಂದೆಯಲ್ಲಿ ಭಾಗಿಯಾಗಬಾರದು. ದಯವಿಟ್ಟು ಇದು ನನ್ನ ರಿಕ್ವೆಸ್ಟ್ ಅನ್ಕೋಳ್ಳಿ. ಬೆಟ್ಟಿಂಗ್ ನಲ್ಲಿ ಹಣ ಕಳಕೊಂಡು ಕುಟುಂಬ ಬಿಟ್ಟು ಹೋದವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋ ನೋಡಿದ್ದೇವೆ, ಪೋಸ್ಟ್ ನೋಡಿದ್ದೇವೆ. ನಿಮಗೂ ಅಂತಹ ಪರಿಸ್ಥಿತಿ ಬರಬಾರದು ಅಂದ್ರೇ ನೀವು ಬೆಟ್ಟಿಂಗ್ ಗಾಗಿ ಕ್ರಿಕೆಟ್ ನೋಡದೇ, ಖುಷಿಗಾಗಿ ಕ್ರಿಕೆಟ್ ನೋಡಿ… ಅಭಿಮಾನಕ್ಕಾಗಿ ಕ್ರಿಕೆಟ್ ನೋಡಿ… ಇದು ಎಲ್ಲರಿಗೂ ಕ್ಷೇಮ..
ನಾನು ಆರ್ಥಿಕವಾಗಿ ಸಾಕಷ್ಟು ಬಲಿಷ್ಠ ಇದೀನಿ, ನಾನು ಬೆಟ್ಟಿಂಗ್ ಮಾಡೇ ಮಾಡ್ತೀನಿ ಅಂದೋರಿಗೆ ಏನೂ ಹೇಳೋಕ್ ಆಗಲ್ಲ, ಅದು ಅವರ ವಯಕ್ತಿಕ ವಿಚಾರ. ದುಡ್ಡಿದ್ದೋರು ಹೆಂಗಿದ್ರೂ ನಡೆಯತ್ತೆ. ಉಳಿದವರು ನಿಮ್ಮ ಕುಟುಂಬ ಹಾಗೂ ಆರ್ಥಿಕ ಪರಿಸ್ಥಿತಿ ನೋಡ್ಕೊಂಡು ಜೀವನ ಮಾಡಿ ಅನ್ನೋದಷ್ಟೇ ನನ್ನ ಕಾಳಜಿ. ಅದರ ಕಹಿ ಅನುಭವ ಅದಾಗಲೇ ಅದರ ಬಗ್ಗೆ ಗೊತ್ತಾಗೋದು. ಇಲ್ಲವಾದರೆ ಕಣ್ಣಾರೆ ನೋಡಿದಾಗಲೇ ಅದರ ಬಿಸಿ ತಟ್ಟೋದು. ನಾನು ಕಣ್ಣಾರೆ ನೋಡಿನಿ. ಎರಡು ತಿಂಗಳು ಐಪಿಎಲ್ ಸಲುವಾಗಿ 3, 4 ವರ್ಷ ಊರು ಬಿಟ್ಟು ದುಡಿಯೋಕೆ ಹೋದವರನ್ನ ನೋಡಿದೀನಿ. ದಯವಿಟ್ಟು ಕಹಿ ಅನುಭವ ನಡೆಯುವ ತರಹ ಮಾಡ್ಕೋಬೇಡಿ ಸ್ನೇಹಿತರೇ.***************************
✍🏻 ಪ್ರಕೃತಿ ಬೆಳಗಾವಿ ಸಂಪಾದಕರು…