ಕ್ರೀಡೆಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ
ಸಮುದಾಯ ನಿರ್ಮಾಣ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಶಿವಶರಣ ಹರಳಯ್ಯ ಸಮಾಜದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಥಳೀಯರು ಕಾಳಜಿ ವಹಿಸಿ ಸಮುದಾಯ ಭವನ ಅತ್ಯಂತ ಸುಂದರವಾಗಿ ಮತ್ತು ಗುಣಮಟ್ಟದಿಂದ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಚಿದಾನಂದ ದೊಡಮನಿ, ಪುರಸಭೆ ಸದಸ್ಯರಾದ ಸಂಗೀತಾ ರಾಯಬಾಗ್, ರಾಜು ದೊಡಮನಿ, ಭರಮಪ್ಪ ಖಾನಪೇಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.**********************