ಕವನಗಳುಕ್ರೀಡೆಪ್ರಕೃತಿ ಬೆಳಗಾವಿಬೆಂಗಳೂರುಬೆಳಗಾವಿರಾಜಕೀಯರಾಜ್ಯ

ಮಹರ್ಷಿ ವಾಲ್ಮೀಕಿ ರವರ ಜೀವನ&ಸಾಧನೆ ಎಲ್ಲರಿಗೂ ಪ್ರೇರಣೆ ಶಿ ಕುಸುಗಲ್, ಸುರೇಶ್ ಯಾದವ್ ಮಹೇಶ ಶಿಗಿಹಳ್ಳಿ ಭಾಷಣ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಇವತ್ತು ರಾಮತೀರ್ಥ ನಗರ ಗಣೇಶ್ ವೃತ್ತದಲ್ಲಿ ಕರ್ನಾಟಕ ಪ.ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆ ವತಿಯಿಂದ ಇವತ್ತು ಸಂಘಟನೆಯ ನಾಮಫಲಕ ಉದ್ಘಾಟನೆ ಮಾಡಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಸ್ಥಳೀಯ ಮುಖಂಡರು ಸಮಾಜ ಸೇವಕರು ಸುರೇಶ್ ಯಾದವ ರವರು ಮಹರ್ಷಿ ವಾಲ್ಮೀಕಿ ರವರ ಆದರ್ಶ ಜೀವನ ಮತ್ತು ಇತಿಹಾಸದ ಬಗ್ಗೆ ವಿವರಿಸಿ ಮಾತನಾಡಿದರು.

ಆದ ನಂತರ ಹಿರಿಯ ಸಾಹಿತಿಗಳಾದ ಕುಸುಗಲ್ ರವರು ಮಹರ್ಷಿ ವಾಲ್ಮೀಕಿ ರವರ ಜೀವನ ಮೌಲ್ಯಗಳನ್ನು ಮೆಲುಕು ಹಾಕಿ ಇತಿಹಾಸದ ಬಗ್ಗೆ ವಿವರಣೆ ಮಾಡಿದರು. ಮತ್ತು ನಂತರ ಸಂಘಟನೆಯ ರಾಜ್ಯಾಧ್ಯಕ್ಷರು ಮಹೇಶ ಶಿಗೀಹಳ್ಳಿ ರವರು ಮಹರ್ಷಿ ವಾಲ್ಮೀಕಿ ರವರ ಜ್ಞಾನ ಮತ್ತು ಚರಿತ್ರೆಯ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಮತೀರ್ಥ ನಗರ ಸ್ಥಳೀಯ ರಹವಾಸಿಗಳು ಗುರುಹಿರಿಯರು ಮುಖಂಡರು ಯುವಕರು ಭಾಗವಹಿಸಿದ್ದರು.

ಸಿದ್ಧರಾಯಿ ನಾಯಕ
ಸಂತೋಷ್ ಗುಬಚಿ
ರಾಜು ಶಿಗಿಹಳ್ಳಿ
ಶಕ್ತಿ ಶಿಗೀಹಳ್ಳಿ
ಪ್ರಜ್ವಲ್ ಹೊರಕೇರಿ
ಸೋನು ನಾಯ್ಕ
ಆಕಾಶ್ ಬೇವಿನಕಟ್ಟಿ
ಗಂಗಾರಾಮ
ಬಾಲಕೃಷ್ಣ ಹಾಗೂ ಇನ್ನುಳಿದ ಯುವಕರು ಹಿರಿಯರು ಉಪಸ್ಥಿತರಿದ್ದರು.**********************

Back to top button