ಕವನಗಳುಪ್ರಕೃತಿ ಬೆಳಗಾವಿಬೆಂಗಳೂರುಬೆಳಗಾವಿರಾಜಕೀಯರಾಜ್ಯ

ಕೆರೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಸಮಯ ಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮಸ್ಥರು ಕೂಡ ಕೆಲಸದ ಮೇಲೆ ನಿಗಾವಹಿಸಬೇಕು. ಎಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿ ಮಾಡೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

ಇದೇ ವೇಳೆ, ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸಿದ್ಧೇಶ್ವರ ದೇವಸ್ಥಾನ ಕಟ್ಟಡದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕಟ್ಟಡ ಕಾಮಗಾರಿ ಬಗ್ಗೆ ಗ್ರಾಮದ ಹಿರಿಯರ ಜೊತೆ ಚರ್ಚಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಸಿ ಪಾಟೀಲ, ಶ್ರೀಕಾಂತ ಮಧುಭರಮಣ್ಣವರ, ಸುರೇಶ ಇಟಗಿ, ಸಂತೋಷ ಕಂಬಿ, ಸುರೇಶ ಕಂಬಿ, ರಾಮನಗೌಡ ಪಾಟೀಲ, ಅಪ್ಪುರಾಯ ನಂದಿ, ಈರಣ್ಣ ಚಿನ್ನನವರ, ಆನಂದ ಮುಖಾಸಿ, ಚಂಬಯ್ಯ ಹಿರೇಮಠ್, ನಿಂಗಪ್ಪ ಹೊನ್ನಿಹಾಳ, ವಿನಾಯಕ ಪಾಟೀಲ, ಅಜಿತ್ ಕುಮಾರ, ಶಿವು ಕಂಬಿ, ಅಯ್ಯಪ್ಪ ಮಾವಿನಕಟ್ಟಿ, ರಾಚಯ್ಯ ಹಿರೇಮಠ್, ಅಪ್ಪಾಜಿ ಹನುಮನಹಟ್ಟಿ, ಮಲ್ಲಿಕಾರ್ಜುನ ವಾಲಿ, ಕರೆಪ್ಪ ತಳವಾರ, ಈರಪ್ಪ ಮಠಪತಿ, ಶಿವನಗೌಡ ಪಾಟೀಲ, ನಿಂಗಪ್ಪ ನಂದಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.*********************

Back to top button