ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷವೇ ಕಾಂಗ್ರೆಸ್ ಪಕ್ಷ: ಶಾಸಕ ಮಹೇಂದ್ರ ತಮ್ಮಣ್ಣವರ…!!

ಸವಸುದ್ದಿ: 176 ಮನೆಗಳ ಮಂಜೂರಾತಿ ಆದೇಶಪತ್ರ ವಿತರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ…

ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ರಾಜ್ಯದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಬಡವರು, ದುರ್ಬಲರು, ನಿರ್ಗತಿಕರು ಸುಖವಾಗಿ- ನೆಮ್ಮದಿಯಿಂದ ಬದುಕುತ್ತಿದ್ದು, ರಾಜ್ಯದಲ್ಲಿ ಗೃಹಲಕ್ಷ್ಮಿ, ಶಕ್ತಿಯೋಜನೆ, ಅನ್ನಭಾಗ್ಯ, ಗ್ರಹಜ್ಯೋತಿ, ವಿದ್ಯಾನಿಧಿ ಸೇರಿ ಪಂಚ್ ಯೋಜನೆಗಳಿಂದ ಬಡವರು ನೆಮ್ಮದಿಯಿಂದ ಬದುಕುವಂತ್ತಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷವೇ ಕಾಂಗ್ರೆಸ್ ಪಕ್ಷವೆಂದು ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ರಾಯಬಾಗ ತಾಲೂಕು ಸವಸುದ್ದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೆ.17ರಂದು ಮಂಗಳವಾರ ಮುಂಜಾನೆ 11ಗಂಟೆಗೆ 176 ಬಸವ ವಸತಿ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರಗಳನ್ನು ವಿತರಿಸಿ ಮಾತನಾದರು.

ಗ್ರಾಪಂ ಅಧ್ಯಕ್ಷೆ ಸುವರ್ಣ ಮೂಡಲಗಿ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಹಾಂತೇಶ ಮಾಂಗ, ಸದಸ್ಯರಾದ ರಾಮಕೃಷ್ಣ ನಾಯಕ, ಕಿರಣ ಪಾಟೀಲ, ಮಂಜುನಾಥ ಖಣದಾಳೆ, ಧರೆಪ್ಪ ಮುತ್ನಾಳ, ಲಕ್ಕಪ್ಪ ಪೂಜಾರಿ, ಪ್ರಧಾನಿ ಲೋಕುರೆ, ಬಸಪ್ಪ ಬಳಿಗಾರ, ಮಹಿಳಾ ಸದಸ್ಯರಾದ ಪಾರ್ವತಿ ಪಾಟೀಲ, ಜನ್ನವ್ವ ಸುರಾನಿ, ಸುಶೀಲಾ ಬೆಳಗಲಿ, ಲಕ್ಷ್ಮೀಬಾಯಿ ಪಾಟೀಲ ಇದ್ದರು. ಈ ಸಂದರ್ಭದಲ್ಲಿ ಬಸವರಾಜ ಕಣ್ಣೂರ, ಶ್ರೀಶೈಲ ಪಾಟೀಲ, ಲಕ್ಕಪ್ಪ ಮೇತ್ರಿ, ಮಂಜು ಮಾಂಗ, ದಿಲೀಪ ಅಂಕಲೆ, ಲಕ್ಕಪ್ಪ ಮಾಂಗ, ಬೀರಪ್ಪ ಬೆಳಗಲಿ, ನಾಗಪ್ಪ ನವಿಲಿಹಾಳ, ಶ್ರೀನಿವಾಸ ಪಾಟೀಲ, ರಾವಸಾಬಗೌಡ ಪಾಟೀಲ, ಬಸವರಾಜ ಅರಭಾವಿ, ಹಾಲಪ್ಪ ಮಾವಿನಹೊಂಡ ಇತರರು ಇದ್ದರು.
ಪಿಡಿಒ ಮುತ್ತಪ್ಪ ಶಿವಪುರ ಪ್ರಾಸ್ತಾಹಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ಮುತ್ನಾಳ ನಿರೂಪಿಸಿ, ವಂದಿಸಿದರು.

ಬಾಕ್ಸ್ ಲೈನ್ ==
“ಸವಸುದ್ದಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ176 ಮನೆಗಳ ಮಂಜೂರಾತಿ ಆದೇಶ ಪತ್ರಗಳನ್ನು ಪಲಾನುಭವಿಗಳಿಗೆ ವಿತರಿಸಲಾಗಿದ್ದು,
ಬಸವ ವಸತಿ ಯೋಜನೆಯಲ್ಲಿ 145 ಮನೆಗಳು, ಅಂಬೇಡ್ಕರ್ ವಸತಿ ಯೋಜನೆಯಲ್ಲಿ 31 ಮನೆಗಳು, ಒಟ್ಟು 176 ಮನೆಗಳ ಮಂಜುರಾತಿ ಆದೇಶ ಪತ್ರವನ್ನು ನೀಡಲಾಗಿದ್ದು, ಅಂಬೇಡ್ಕರ್ ವಸತಿ ಫಲಾನುಭವಿಗಳಿಗೆ 1.99 ಲಕ್ಷ ರೂಪಾಯಿ, ಬಸವ ವಸತಿ ಯೋಜನೆಯ ಸಾಮಾನ್ಯ ಫಲಾನುಭವಿಗಳಿಗೆ 1.19ಲಕ್ಷ ರೂಪಾಯಿ ಹಾಗೂ ನರೇಗಾ ಯೋಜನೆ ಅಡಿಯಲ್ಲಿ 90 ಮಾನವ ದಿನಗಳ ವೇತನವನ್ನು ಪಾವತಿಸಲಾಗುವುದು”
===} ಮುತ್ತಪ್ಪ ಶಿವಾಪುರ
(ಪಿಡಿಓ ಗ್ರಾಪಂ ಸವಸುದ್ದಿ)

Back to top button