225ಬ ರಲ್ಲಿಯ ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸಿರೆಂದು ರಾಯಬಾಗ ತಹಸೀಲ್ದಾರ್, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸಚಿವ ಸತೀಶ ಜಾರಕಿಹೊಳಿ…!!

ಪಾಲಭಾವಿ ಗ್ರಾಮದ ಸರ್ವೇ ನಂಬರ್ 225ಬ ರಲ್ಲಿ 7ಎಕರೆ 28ಗುಂಟೆ ಜಮೀನು ಪತ್ತೆ..!!
ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ರಾಯಬಾಗ ತಾಲೂಕು ಪಾಲಬಾವಿ ಗ್ರಾಮದಲ್ಲಿ ಸರ್ವೇ ನಂಬರ್ 225ಬ ರಲ್ಲಿ 7 ಎಕರೆ 28 ಗುಂಟೆ ಜಮೀನುವು ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಗೆ ಸಂಬಂಧಪಟ್ಟಿದ್ದು ಎಂದು ಗ್ರಾಮಸ್ಥರಿಗೆ ಈಗ ಗೊತ್ತಾಗಿದೆ. ಸುಮಾರು ವರ್ಷಗಳಿಂದ ಆ ಜಮೀನಿನ ಅಕ್ಕಪಕ್ಕದ ಜಮೀನು ಮಾಲೀಕರು ತಮ್ಮದೇ ಜಮಿನು ಇದೆ ಎಂದು ಭಾವಿಸಿ ಉಳುಮೆ ಮಾಡುತ್ತ ಬರುತ್ತಿದ್ದರು. ಸುಮಾರು 7-8 ವರ್ಷಗಳಿಂದ ಸತತ ಪ್ರಯತ್ನದಿಂದ ಗ್ರಾಪಂ ಸದಸ್ಯರ, ಗ್ರಾಮಸ್ಥರ ಸಹಕಾರದಿಂದ ಮಾನ್ಯ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗ ದರ್ಶನದಂತೆ ನಮ್ಮ ಪಾಲಬಾವಿ ಗ್ರಾಮದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 7ಎಕರೆ 28ಗುಂಟೆ ಫಲವತ್ತಾದ ಜಮೀನು ಪತ್ತೆಯಾಗಿದೆ ಎಂದು ಗ್ರಾಪಂ ಸದಸ್ಯ ಪ್ರಭು ಕರೋಶಿ ಸುದ್ದಿಗಾರರಿಗೆ ತಿಳಿಸಿದರು.
ಅವರು ಕಳೆದ ಶನಿವಾರ ಮಾನ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪಾಲಬಾವಿ ಗ್ರಾಮದಲ್ಲಿರುವ ಸರ್ವೆ ನಂಬರ್ 225ಬ ರಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 7ಎಕರೆ 28ಗುಂಟೆ ಫಲವತ್ತಾದ ಭೂಮಿಯನ್ನು ಸುಮಾರು ವರ್ಷಗಳಿಂದ ಅಕ್ಕಪಕ್ಕದ ಜಮೀನು ಮಾಲೀಕರು ಉಳುಮೆ ಸಾಗುವಳಿ ಮಾಡುತ್ತ ಬರುತ್ತೀದ್ದರು. ಆ ಜಮೀನನ್ನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸಿದ ನಂತರ ಒಟ್ಟು ಜಮೀನನ್ನು ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ, ಶಾಲಾ ಕಾಲೇಜು, ಆಟದ ಮೈದಾನ, ವಸತಿ ನಿಲಯ ನಿರ್ಮಾಣ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಕಡು ಬಡವರಿಗೆ ನಿವೇಶನ ಹಂಚಿಕೆ, ಕೆರೆ, ಆಸ್ಪತ್ರೆ, ಪಶು ಚಿಕಿತ್ಸಾಲಯ ನಿರ್ಮಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪರಪ್ಪ ಕರೋಶಿ, ಕುಡಚಿ ಬ್ಲಾಕ್ ಸೇವಾದಳದ ಅಧ್ಯಕ್ಷ ಮಹಾಲಿಂಗ ಜನವಾಡ, ರಾಮಪ್ಪ ಉಳ್ಳಾಗಡ್ಡಿ, ಗಿರೇಪ್ಪ ಬಳಿಗಾರ, ಸಾಗರ ಕುರಬೆಟ್ಟಿ, ಹೈದರ್ ಮುಜಾವರ, ಸರ್ದಾರ್ ಕಾಗವಾಡ ಇತರರು ಇದ್ದರು.
“ರಾಯಬಾಗ ತಾಲೂಕು ಪಾಲಬಾವಿ ಗ್ರಾಮದಲ್ಲಿ ಸರ್ವೆ ನಂಬರ್ 225ಬ ರಲ್ಲಿ 7ಎಕರೆ 28ಗುಂಟೆ ಜಮೀನು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ಇರುತ್ತದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ. ಆ ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸಿರೆಂದು ರಾಯಬಾಗ ತಹಸೀಲ್ದಾರ್ ಸುರೇಶ ಮುಂಜೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ಮನು ವಡ್ಡರಗೆ ಸೂಚಿಸಿದ್ದೇನೆ”
===} ಸಚಿವ ಸತೀಶ ಜಾರಕಿಹೊಳಿ
(ಸಚಿವರು, ಲೋಕೋಪಯೋಗಿ ಇಲಾಖೆ)
“ಪಾಲಬಾವಿ ಗ್ರಾಮದ ಹೊರವಲಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದ ಸರ್ವೆ ನಂಬರ್ 225ಬ ದಲ್ಲಿ 7ಎಕರೆ 28ಗುಂಟೆ ಜಮೀನು ಇರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಅವರ ಆದೇಶದಂತೆ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿ ಸರ್ವೇ ನಂಬರ್ 225ಬ ರಲ್ಲಿರುವ 7ಎಕರೆ 28ಗುಂಟೆ ಜಮೀನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಿ ಮಾನ್ಯ ಸಚಿವರ ಮಾರ್ಗ ದರ್ಶನದಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ಜಮೀನು ಹಸ್ತಾಂತರಿಸಲಾಗುವುದು”
===} ಸುರೇಶ್ ಮುಂಜೆ
(ತಹಶೀಲ್ದಾರರು, ರಾಯಬಾಗ)
===============