*ಆತ್ಮೀಯ ಗ್ರಂಥಪಾಲಕರು ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಪರರೇ*

ಪ್ರಕೃತಿ ಬೆಳಗಾವಿ ಸುದ್ದಿ : ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ.), ಬೆಂಗಳೂರು, ಬೆಳಗಾವಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ *28-06-2026* , *ಭಾನುವಾರ* *ಬೆಳಿಗ್ಗೆ 11:00* ಗಂಟೆಗೆ ಜಿಲ್ಲಾ *ಸಾರ್ವಜನಿಕ ಗ್ರಂಥಾಲಯ, ಡಿಸಿ ಕಾಂಪೌಂಡ್, ಬೆಳಗಾವಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ಗಣ್ಯರು ಆಗಮಿಸುತ್ತಿದ್ದು, ಇದು ನಮ್ಮ ವೃತ್ತಿಪರ ಸಮುದಾಯದ ಮಹತ್ವದ ಕಾರ್ಯಕ್ರಮವಾಗಿದೆ. ಗ್ರಂಥಾಲಯ ವೃತ್ತಿಯ ಅಭಿವೃದ್ಧಿ, ಪರಸ್ಪರ ಪರಿಚಯ, ಸಹಕಾರ ಹಾಗೂ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಉಪಸ್ಥಿತಿ ಅತ್ಯಂತ ಅಮೂಲ್ಯವಾಗಿದೆ.
ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ *Panel Discussion* ನಲ್ಲಿ ಗ್ರಂಥಾಲಯ ವೃತ್ತಿಯ ಬೆಳವಣಿಗೆ, ಉದ್ಯೋಗಾವಕಾಶಗಳು, ನೇಮಕಾತಿ ಹಾಗೂ ವೃತ್ತಿಪರರ ಸಮಸ್ಯೆಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಅಮೂಲ್ಯ ಸಲಹೆಗಳು, ಅಭಿಪ್ರಾಯಗಳು ಹಾಗೂ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ, ಸರ್ಕಾರದ ಗಮನಕ್ಕೆ ತರಲು ಈ ವೇದಿಕೆ ಸಹಕಾರಿಯಾಗಲಿದೆ.
ಆದ್ದರಿಂದ, ದಯವಿಟ್ಟು ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಿ. ಜೊತೆಗೆ ತಮಗೆ ಪರಿಚಯವಿರುವ ಗ್ರಂಥಪಾಲಕರು ಮತ್ತು ಮಾಹಿತಿ ವಿಜ್ಞಾನ ವೃತ್ತಿಪರರನ್ನೂ ಕಾರ್ಯಕ್ರಮಕ್ಕೆ ಕರೆತಂದು ಭಾಗವಹಿಸಲು ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
“**ನಮ್ಮ ವೃತ್ತಿಯ ಬೆಳವಣಿಗೆಗೆ ನಮ್ಮ ಭಾಗವಹಿಸುವಿಕೆಯೇ ಶಕ್ತಿ.**”
” *ನಮ್ಮ ವೃತ್ತಿಯ ಗೌರವ, ಬೆಳವಣಿಗೆ ಮತ್ತು ಭವಿಷ್ಯಕ್ಕಾಗಿ ನಿಮ್ಮ ಉಪಸ್ಥಿತಿ ಅಮೂಲ್ಯ* .”
ನಿಮ್ಮ ಆಗಮನವನ್ನು ಆತ್ಮೀಯವಾಗಿ ನಿರೀಕ್ಷಿಸುತ್ತೇವೆ.
ಧನ್ಯವಾದಗಳೊಂದಿಗೆ,
*Team KALA ಬೆಳಗಾವಿ ಜಿಲ್ಲಾ ಘಟಕ*
*ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ.)****************************************











